ಅಲ್ಲೇ ಪತಿಯ ಬಳಿ ಕುಳಿತು ದಿನಪತ್ರಿಕೆ ಓದುತ್ತಿದ್ದ ಸುಮಾ ಒಂದೈದು ನಿಮಿಷ ಪತ್ರಿಕೆಯ ಮೇಲೆ ಕಣ್ಣಾಡಿಸಿ "ರೀ ತಗೊಳ್ಳಿ ನಂದು ಓದಿ ಆಯಿತು " ಎನ್ನುತ್ತಾ ಪತಿಯ ಕೈಗೆ ಇಟ್ಟರು, ರಾಯರು ನಗ್ತಾ "ಏನೆ ಇದು ಮೊದಲೆಲ್ಲ ಗಂಟೆಗಟ್ಟಲೆ ಓದುತ್ತಿದ್ದೆ ಈಗ ಏನಾಯ್ತು ಐದು ನಿಮಿಷನು ಓದಲ್ಲ ಅಂತಿಯಲ್ಲ?" ಅದಕ್ಕೆ ಸುಮಾ "ಅದೇನೋ ಇಂದಿನ ಸಮಾಚಾರಗಳನ್ನ ಓದೋಕೆ ಮನಸ್ಸೇ ಬರಲ್ಲ, ದಿನ ಬೆಳಗಾದರೆ ಅದೇನೋ ವಿಷಯಗಳು, ಘಟನೆಗಳು ಮನಸ್ಸನ್ನ ಘಾಸಿ ಮಾಡುತ್ತೆ ನಾವು ಬಾಲ್ಯದಲ್ಲಿ ಇರುವಾಗ ಕಾಲ ಎಷ್ಟು ಚನ್ನಾಗಿತ್ತು, ಈಗ ಕಾಲ ಬಲಾಗಿದೆ ಮೊದಲಿನ ತರಹ ಇಲ್ಲ" ರಾಯರು ನಸು ನಗುತ್ತ " ಘಟನೆಗಳು ಮನಸ್ಸಿಗೆ ಘಾಸಿ ಮಾಡುತ್ತವೆ ನಿಜ ಅದನ್ನ ನಾನು ಒಪ್ಕೋತೀನಿ ಆದರೆ ನೀನು ಹೇಳೋ ಪ್ರಕಾರ ಕಾಲ ಬದಲಾಗಿದೆ ಅಂದರೆ ನಾನು ಒಪ್ಪಲ್ಲ ಏಕೆಂದ್ರೆ ಮನುಷ್ಯನ ಮನಸ್ಥಿತಿ ಬದಲಾಗಿದೆ ಹೊರತು ಕಾಲ ಯಾವತ್ತೂ ಬದಲಾಗಲ್ಲ ಅದು ತನ್ನ ಪಾಡಿಗೆ ಚಲಿಸುತ್ತಿರುತ್ತೆ ಅಷ್ಟೇ," ನಮ್ಮ ಹಿರಿಯರು ಹೇಳಿದ ಹಾಗೆ ಪರಿಸ್ಥಿತಿಗೂ ಮನಸ್ತಿತಿಗೂ ತುಂಬಾನೇ ಸಂಬಂಧ ಇದೆ,"ಪರಿಸ್ಥಿತಿ ಬದಲಾಗದಿದ್ದರೆ ಮನಸ್ಥಿತಿ ಬದಲಾಯಿಸಬೇಕು" ಮಾತು ನಿಜ ಕೂಡ ಹೌದು, ಮಸುಷ್ಯನ ಮನಸ್ಥಿತಿ ಆಲೋಚನಾ ಲಹರಿ ಬದಲಾದಂತೆಲ್ಲ ಪರಿಸ್ಥಿತಿ ಕೂಡ ಬದಲಾಗುತ್ತದೆ.


ಹೌದು, ಪ್ರಪಂಚದಲ್ಲಿ ನಡೆಯುತ್ತಿರುವ ಅನ್ಯಾಯ ಅನಾಚಾರ ಹಾಗು ಎಲ್ಲ ಆಗು ಹೋಗುಗಳಿಗೆ ಮನುಷ್ಯನ ಮನಸ್ಥಿತಿಯೇ ಕಾರಣ, ಇದರಲ್ಲಿ ನಮ್ಮ ಪಾಲು ಸರಿ ಸಮಾನವಾಗಿದೆ.

ಯಾಕೆ ಅಂತೀಯಾ ? ಇವತ್ತು ನಮ್ಮ ಹತ್ತಿರ ದೊಡ್ಡ ಮನೆ ಇದೆ ಆದರೆ ಚಿಕ್ಕ ಸಂಸಾರ, ನಮ್ಮ ಅಗತ್ಯತೆಗಳನ್ನ ಪೂರೈಸುವ ಎಲ್ಲ ಸವಲತ್ತುಗಳು ಇವೆ ಆದರೆ ಅದನ್ನ ಸಂಪೂರ್ಣವಾಗಿ ಮನಸಾರೆ ಅನುಭವಿಸೋದಕ್ಕೆ ಸಮಯಾನೆ ಇಲ್ಲ, ಅದೇ ತರಹ ನಾವು ನಮ್ಮ ಮಕ್ಕಳಿಗೆ ದೊಡ್ಡ ದೊಡ್ಡ ಡಿಗ್ರಿಗಳನ್ನ ಓಡಿಸುತ್ತಾ ಇದೀವಿ ಆದರೆ ಅವರಿಗೆ ಜೀವನ ತೂಗಿಸಿಕೊಂಡು ಹೋಗೋದಕ್ಕೆ ಬೇಕಾದ ಸಾಮಾನ್ಯ ಜ್ಞಾನ ಹಾಗು ಸಂಸ್ಕಾರ ಕೊಡೋದರಲ್ಲಿ ಎಲ್ಲೊ ಎಡವಿದಿವಿ. ಈಗಿನ ಯುವ ಪೀಳಿಗೆಗೆ ಅಗಾದವಾದ ಜ್ಞಾನ ಇದೆ ಆದರೆ ಪರಿಸ್ಥಿತಿಯನ್ನ ಅವಲೋಕಿಸುವ ಸಾಮರ್ಥ್ಯವಿಲ್ಲ ಹೀಗೆ ಅನೇಕ ಸಮಸ್ಯೆಗಳನ್ನ ಹಾಸಿ ಹೊದ್ದು ಕೊಂಡಿದೆ ನಮ್ಮ ಯುವ ಸಮಾಜ.


ಇದೆಲ್ಲ ಯಾಕೆ ಆಗ್ತಾ ಇದೆ ಗೊತ್ತ ? ನಾವು ನಡೆಸ್ತಾ ಇರುವ ಯಾಂತ್ರಿಕ ಜೀವನ, ನಮ್ಮ ಸೊ ಕಾಲ್ಡ್ ಇಗೋ ಅಂದರೆ ಸ್ವ ಪ್ರತಿಷ್ಠೆ ಹಾಗು ನಾವು ಅವರಿಗೆ ದಾರಿ ಎರೆಯುತ್ತಿರುವ ಸಂಸ್ಕಾರದ ಪಾತ್ರ ಬಹುಪಾಲು ಅದರ ಜೊತೆ ಜೊತೆಗೆ  ಈಗಿನ ಜೀವನ ಶೈಲಿ ಅಂದರೆ ವಿಜ್ಞಾನ ತಂತ್ರಜ್ಞಾನಗಳು ಬೆಳೆದಂತೆಲ್ಲ ಮನುಷ್ಯ ಅದರೊಂದಿಗೆ ಪೈಪೋಟಿಗೆ ಇಳಿದು ತನ್ನ ತನವನ್ನ ಎಲ್ಲೊ ಕಳೆದು ಕೊಳ್ತಾ ಇದಾನೇ , ಸಂಬಂಧಗಳ ನಡುವೆ ಪ್ರೀತಿ ವಾತ್ಸಲ್ಯ ಬಾಂಧವ್ಯದ ಕೊರತೆ ಇದೆ, ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಬಂಧಗಳ ಮಹತ್ವ ಮಾನವೀಯತೆಯ ಪಾಠ ಬಹುಮುಖ್ಯ ಹಿಂದಿನ ಕಾಲದ ನಮ್ಮ ಆಚಾರ ವಿಚಾರ ಸಂಪ್ರದಾಯದ ಆಚರಣೆಗಳಲ್ಲಿ ಇದೆಲ್ಲದರ ಮಿಳಿತ ಇತ್ತು, ಇಂದು ಪಾಶ್ಚಿಮಾತ್ಯ ಸಂಸ್ಕೃತಿಗಳಿಗೆ ಮಾರು ಹೋಗಿ ಅದೆಲ್ಲವನ್ನು ಕಳೆದುಕೊಳ್ಳುತ್ತಾ ಇದ್ದೇವೆ.


ನಾವು ಮಾಡ್ತಾ ಇರೋ ಸಣ್ಣ ಸಣ್ಣ ಕಾರಣಗಳಿಂದ ಸಂಬಂಧಗಳು ಹಾಳಾಗ್ತಾ ಇದೆ, ನಾವು ಸಂಬಂಧಗಳನ್ನ ನೋಡ್ತಾ ಇರೋ ರೀತಿ ಬದಲಾಗಿದೆ, ನಮ್ಮ ಹಿರಿಯರು ನೋಡ್ತಾ ಇದ್ದ ರೀತಿಗೂ ನಾವು ನೋಡ್ತಾ ಇರೋ ರೀತಿಗೂ ತುಂಬಾನೇ ವ್ಯತ್ಯಾಸ ಇದೆ. ಈಗ ಎಲ್ಲದಕ್ಕೂ ಆತುರ, ಇಂದು ಪ್ರೀತಿ ,ಗೆಳೆತನ, ಮದುವೇ, ವಿಚ್ಛೇದನ ಎಲ್ಲವೂ ಬೇಗನೆ ಆಗುತ್ತವೆ ಹಾಗೇನೇ ಜಗಳ ಮತ್ತು ಸಂಬಂಧಗಳನ್ನ ಕಡಿದು ಕೊಳ್ಳುವುದು  ಕೂಡ  ಕ್ಷಣ ಮಾತ್ರದಲ್ಲಿ ನಡೆದು ಹೋಗುತ್ತದೆ ಹಾಗೇನೇ ಬೇರೆಯವರು ನಮ್ಮನ್ನ ನಾವು ಹೇಗೆ ಇದಿವೊ ಹಾಗೆ ಒಪ್ಪಿಕೊಳ್ಳಬೇಕು ಎಂದು ಬಯಸುತ್ತೇವೆ ಆದರೆ ಅವರನ್ನ ಅವರಿದ್ದ ಹಾಗೆ ಒಪ್ಪಿಕೊಳ್ಳೋದಕ್ಕೆ ತಯಾರಿರುವುದಿಲ್ಲ, ಅವರು ನಮಗೋಸ್ಕರ ಬದಲಾಗಲಿ ಅನ್ನೋ ನಾವು ನಾವೇನಾದ್ರು ಅವರಿಗೋಸ್ಕರ ಬದಲಾದರೆ ಎಲ್ಲೊ ನಮ್ಮ ತನವನ್ನ ಕಳೆದುಕೊಂಡಂತೆ ಎಂಬ ಭಾವನೆ ನಮ್ಮ ಸ್ವಪ್ರತಿಷ್ಠೆ ಅಡ್ಡ ಬಂದು ಬಿಡುತ್ತೆ.

ನಾವು ಮಾಡ್ತಾ ಇರೋ ಕೆಲವೊಂದು ತಪ್ಪುಗಳನ್ನ ನೋಡೋದಕ್ಕೆ ಹೋದರೆ

1)      ಒಬ್ಬರ ಮಾತನ್ನ ಒಬ್ಬರು ಕೇಳುತ್ತಿಲ್ಲ

ತಾಳ್ಮೆ ಇಲ್ಲ, ಇವತ್ತಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಪ್ರೀತಿ ಪಾತ್ರರಲ್ಲಿ ತಮ್ಮ ಎಲ್ಲ ಭಾವನೆಗಳನ್ನ ಹಂಚಿಕೊಳ್ಳೋದಕ್ಕೆ ಬಯಸುತ್ತಾರೆ ಮತ್ತು ವ್ಯಕ್ತಿ ನಮ್ಮನ್ನ ಅರ್ಥ ಮಾಡಿಕೊಳ್ಳಲಿ ಅಂತ ಬಯಸ್ತಾರೆ ಆದರೆ ಇನ್ನೊಬ್ಬ ವ್ಯಕ್ತಿಯ ಮಾತನ್ನು ಕೇಳುವ ತಾಳ್ಮೆ ಆಗಲಿ ವ್ಯವಧಾನ ಆಗಲಿ ನಮಗೆ ಇಲ್ಲವೇ ಇಲ್ಲ, ಸಂಬಂಧ ಗಟ್ಟಿಯಾಗ ಬೇಕಾದರೆ ಒಂದೊಳ್ಳೆ ನಿರ್ಧಾರ ತಗೋಬೇಕಾದರೆ ಒಬ್ಬರನ್ನೊಬ್ಬರು ಪರಸ್ಪರ ಆಲಿಸಬೇಕು.


2)     ಬದ್ಧತೆಯ ಕೊರತೆ (lack of commitment)

ಇವತ್ತಿನ ದಿನಗಳಲ್ಲಿ ಸಂಬಂಧ ಹಾಳಾಗೋದಕ್ಕೆ ಇರೋ ಮುಖ್ಯ ಕಾರಣ  ಬದ್ಧತೆ (COMMITMENT) ಯ ಕೊರತೆ ಯುವ ಜನತೆ ದೀರ್ಘ ಕಾಲದ ಸಂಬಂಧಗಳನ್ನ ನಿಭಾಯಿಸೋದಕ್ಕೆ ಸಾಧ್ಯ ಆಗ್ತಾ ಇಲ್ಲ, ಒಂದು ಚಿಕ್ಕ ಬಿರುಕು ಮೂಡಿದರು ಆ ಸಂಬಂಧದಿಂದ ಹೊರಗಡೆ ಬಂದು ಬಿಡುತ್ತಾರೆ ಅದನ್ನ ಸರಿಪಡಿಸುವ ಮನಸ್ಥಿತಿ ಕೂಡ ಅವರಲಿಲ್ಲ.


3)     ಸಾಮಾಜಿಕ  ಜಾಲತಾಣ (social media)



ಸಾಮಾಜಿಕ ಮಾಧ್ಯಮ ಮತ್ತು ಡೇಟಿಂಗ್ ವೆಬ್ ಸೈಟ್ ಗಳ ಆಗಮನದೊಂದಿಗೆ ಜನರಿಗೆ ವಿಪುಲವಾದ ಆಯ್ಕೆಗಳಿಗೆ ಅವಕಾಶ ಇದೆ, ಹಾಗಾಗಿ  ಒಂದು ಸಂಬಂಧಕ್ಕೆ ಒಳಗಾದಾಗೆಲ್ಲ ಸ್ವಲ್ಪ ದಿನ ಕಾದಿದ್ದರು ಅಥವಾ ಸ್ವಲ್ಪ ಹುಡುಕಿದ್ದರು ಕೂಡ ಇನ್ನು ಚನ್ನಾಗಿರೋ ಆಯ್ಕೆ ಸಿಗ್ತಾ ಇತ್ತ ಏನೋ ಎಂದು ಮನಸ್ಸು ಹೇಳೋದಕ್ಕೆ ಶುರು ಮಾಡುತ್ತೆ,

ಉದಾ: ನಮ್ಮ ಮನೆ ಗಾರ್ಡನ್ ಎಷ್ಟೇ ಚನ್ನಾಗಿದ್ದರು ಪಕ್ಕದ ಮನೆ ಹುಲ್ಲು ಹಾಸು ಕೆಲವೊಮ್ಮೆ ಸುಂದರವಾಗಿ ಕಾಣುತ್ತಲ್ಲ ಹಾಗೆ.





ಜನ ಏನೋ ಉತ್ಸಾಹಕ್ಕೆ ಪ್ರೀತಿಯಲ್ಲಿ ಅಥವಾ ಸ್ನೇಹದಲ್ಲಿ ಬೀಳುತ್ತಾರೆ ಆದರೆ ಅವರೊಳಗಿನ ಹೊಸತನದ ಹುಡುಕಾಟದಲ್ಲಿ ಆತುರದ ಆಯ್ಕೆಗಳಿಗೆ ಒಳಗಾಗ್ತಾರೆ, ಪ್ರೀತಿ ಅಥವಾ ಸ್ನೇಹ ಶುರುವಾದ ದಿನಗಲ್ ಉತ್ಸಾಹ ದಿನ ಕಳೆದಂತೆಲ್ಲ ತನ್ನ ತಾಳ್ಮೆ ಕಳೆದು ಕೊಳ್ತಾ ಇದಾರೆ, ಪ್ರೀತಿ ಮತ್ತು ಸ್ನೇಹದಲ್ಲಿ ಉತ್ಸಾಹಕ್ಕಿಂತ ಪ್ರಬುದ್ಧತೆ ಮುಖ್ಯ.


ಸಂಬಂಧಗಳು ಪರಸ್ಪರ ಹೊಂದಾಣಿಕೆ, ಭಾವನೆಗಳ ಹಂಚಿಕೆಯಿಂದ ಗಟ್ಟಿಯಾಗಬೇಕು ಆದರೆ ಜನ ತೋರಿಕೆಯ ಸಂಬಂಧಗಳಿಗೆ ಒಳಪಟ್ಟು, ಇನ್ನೊಬ್ಬ ವ್ಯಕ್ತಿಯ ದೌರ್ಬಲ್ಯವನ್ನ ತನ್ನ ಉಪಯೋಗಕ್ಕೆ ಬಳಸುವವರ ಸಂಖ್ಯೆ ಹೆಚ್ಚಾಗಿದೆ.


ಸೆಲ್ ಫೋನೆಗಳು ನಮ್ಮ ಅಸ್ತಿತ್ವದ ಒಂದು ಪ್ರಮುಖ ಭಾಗವಾಗಿದೆ, ಜನ ಅದಿಲ್ಲದೆ ಒಂದು ಕ್ಷಣನೂ ಇರೋದಕ್ಕೆ ಸಾಧ್ಯ ಇಲ್ಲವೇನೋ ಅನ್ನೋ ಅಷ್ಟರ ಮಟ್ಟಿಗೆ ಅದಕ್ಕೆ ಒಗ್ಗಿಕೊಂಡು ಬಿಟ್ಟಿದ್ದಾರೆ ಅವರ ಪ್ರೀತಿ ಪಾತ್ರರೊಂದಿಗೆ ಮಾತನಾಡುವಾಗಲೂ ಅವರ ದೃಷ್ಟಿ ನಿರಂತರವಾಗಿ ಫೋನ್ ಮೇಲೆ ಇರುತ್ತದೆ, ಜೀವನ ಕ್ಷಣಿಕ ಅದನ್ನ ಸಂಪೂರ್ಣವಾಗಿ ಜೀವ ಇಲ್ಲದ ವಸ್ತುಗಳೊಂದಿಗೆ ಕಳೆಯಬೇಡಿ.


ಕಾಣದ ಕಡಲಿನ ಹುಡುಕಾಟದಲ್ಲಿ, ನಿಮ್ಮ ಖುಷಿಯ ಹುಡುಕಾಟದಲ್ಲಿ, ಬೇರೊಬ್ಬರ ದೌರ್ಬಲ್ಯವನ್ನ ಬಳಸಿಕೊಳ್ಳಬೇಡಿ, ಸಂಬಂಧವನ್ನ ಕಳೆದುಕೊಳ್ಳಬೇಡಿ, ಸ್ವಲ್ಪ ನಿಮ್ಮ ತನವನ್ನ ಬಿಟ್ಟು ಇನ್ನೊಬ್ಬರನ್ನ ಅರ್ಥಮಾಡಿಕೊಳ್ಳದಕ್ಕೆ ಪ್ರಯತ್ನಿಸಿ, ಸುಂದರ ಸಂಬಂಧದ ಜೊತೆಗೆ ಬದುಕನ್ನ ಹಸನಾಗಿಸಿ.


CLICK HERE TO WATCH THE VIDEO


article by : Preethi hegde (freelance writer and content writer, Blogger)

click here to contact me