YOUNG MIND

ಕೋರೋನ ಗೆ ಅರಿವಿನ ಮದ್ದು


ಹೌದು!,  ಕೋರೋನಕ್ಕೆ ಅರಿವೇ ಮದ್ದು


ಕೋರೋನ ಎಂಬ ಮಹಾಮಾರಿಯು ವಿಶ್ವಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಕೆಲವೊಂದು ನಿರ್ಧಾರಗಳು ಮತ್ತು ಕ್ರಮಗಳು ನಮ್ಮಿಂದಲೇ ಸ್ವ ಪ್ರೇರಣೆಯಿಂದ ಆಗಬೇಕಿದೆ.

ನಿಮ್ಮ ಮತ್ತು ನಿಮ್ಮವರ ಜೀವದ ಜವಾಬ್ದಾರಿಯನ್ನು ನೀವೇ ಹೊರಬೇಕು, ಸರಕಾರ ಇದೆ, ವೈದ್ಯರು ಇದ್ದಾರೆ, ನನ್ನ ಬಂದುಗಳು ಇದ್ದಾರೆ ನನಗೇನಾದರೂ ಆದರೆ ನೋಡಿಕೊಳ್ಳುತ್ತಾರೆ ಅನ್ನುವ ಭ್ರಮೆಯಲ್ಲಿ ನೀವಿದ್ದರೆ ದಯವಿಟ್ಟು ಇನ್ನಾದರೂ ಅದರಿಂದ ಹೊರಬನ್ನಿ.

ಪರಿಸ್ಥಿತಿ ಕೈಮೀರುವ ಹೊಸ್ತಿಲಿನಲ್ಲಿ ನಾವಿದ್ದೇವೆ, ಕೈ ಮೀರುವ ಮುನ್ನ ಎಚ್ಚೆತ್ತುಕೊಳ್ಳೋಣ .

ನಮ್ಮ ಪ್ರತಿಯೊಬ್ಬರ ಸಹಕಾರದ ವಿನಃ ಸರಕಾರದಿಂದ ಏನು ಮಾಡಲು ಸಾಧ್ಯವಿಲ್ಲ, ಸರಕಾರದ ಕೆಲಸಗಳಿಗೂ ಕೆಲವೊಂದು ಇತಿಮಿತಿಗಳಿವೆ ಹಾಗು ಯಾವುದೇ ಸರಕಾರಕ್ಕೂ ತನ್ನ ಪ್ರಜೆಗಳ ಎಲ್ಲ ಅವಶ್ಯಕತೆಗಳನ್ನು ಪೊರೆಸುವ ಸಾಮರ್ಥ್ಯ ಇರುವುದು ಸಾಧ್ಯವಿಲ್ಲ , ಸರಕಾರಕ್ಕೆ ತನ್ನದೇ ಆದ ಇತಿ ಮಿತಿಗಳಿವೆ, ಸಂಪನ್ಮೂಲದ ಕೊರತೆಯೊಂದಿಗೆ ಕಾನೂನಿನ ತೊಡಕುಗಳೊ ಇರುತ್ತವೆ. ನಮ್ಮ ಭಾರತದಂತ ಜನಸಂಖ್ಯೆಯ ದೇಶದಲ್ಲಿ ಇದು ಕಷ್ಟ ಸಾದ್ಯಕೂಡ ಹೌದು.

ಆದರೂ ಸರಕಾರದ ಕೆಲವೊಂದು ಕ್ರಮಗಳು ಶ್ಲಾಘನೀಯ.

ಇತ್ತೀಚಿನ ದಿನಗಳಲ್ಲಿ ಕೆಲವೊಂದು ಬುದ್ದಿಜೀವಿಗಳು ಲಾಕ್ ಡೌನ್  ಎನ್ನುವ ಪದವನ್ನು ಬಹುವಾಗಿ ಬಳಸುತ್ತಿದ್ದಾರೆ, ಸ್ವಾಮೀ ಸಾಂಕ್ರಾಮಿಕ ರೋಗ ತಡೆಗಟ್ಟಲು ಎಷ್ಟು ದಿನ ಕಿಟಕಿ ಬಾಗಿಲು ಮುಚ್ಚಿ ಬದುಕುತ್ತೀರಾ? ನಿಮ್ಮ ವ್ಯಯಕ್ತಿಕ  ಸಂದರ್ಭಗಳಲ್ಲಿ  ಮತ್ತು ಕಾರ್ಯಕ್ರಮಗಳಲ್ಲಿ ಸಾಮಾಜಿಕ ನಿಯಮಗಳನ್ನು ಗಾಳಿಗೆ  ತೂರಿ ಸಂಭ್ರಮಿಸುವ ನೀವು ಬೇರೆ ಸಂದರ್ಭದಲ್ಲಿ ಉಪನ್ಯಾಸ ಕೊಡುವುದು ಎಷ್ಟು ಸರಿ? ಅದರ ಬದಲು ನಿಮ್ಮ ತಪ್ಪುಗಳನ್ನು ತಿದ್ದಿಕೊಂಡು ಜನರಲ್ಲಿ ಜಾಗ್ರತಿ ಮೂಡಿಸಿ, ನಿಮ್ಮ ಜೊತೆಗಿರು ಅವಿವೇಕಿಗಳಿಗೆ ಬುದ್ದಿ ಹೇಳಿ.

ಲಾಕ್ ಡೌನ್  ಮಾಡುವುದರಿಂದ ಶ್ರೀಮಂತ ವರ್ಗಕ್ಕೆ ಹೆಚ್ಚೇನೂ ಸಮಸ್ಯೆ ಆಗದಿದ್ದರು ಬಡ ಮತ್ತು ಮಧ್ಯಮ ವರ್ಗದ ಜನತೆಯ ಬದುಕು ದುಸ್ಥರ ಆಗುವುದರಲ್ಲಿ ಸಂಶಯವಿಲ್ಲ.

ಸರಕಾರ ಅದೆಷ್ಟೋ ಯೋಜನೆಗಳನ್ನು ಮಾಡಿರಬಹುದು ಯಶಸ್ವಿಯಾಗಿದೆ ಎಂದು ಅಂಕಿ ಅಂಶಗಳಲ್ಲಿ ತೋರಿಸಬಹುದು ಆದರೆ ಅದೆಲ್ಲವು 100% ಜನತೆಗೆ ತಲುಪುವಲ್ಲಿ ವಿಫಲವಾಗಿದೆ, ಅದಕ್ಕೆ ನಾನಾ ಕಾರಣಗಳು ಇರಬಹುದು. ಇದು ಯಾರನ್ನು ದೂಷಿಸುವ ಸಂದರ್ಭವು ಅಲ್ಲ , ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುವ ಸಂದರ್ಭ.

ಆರಂಭದ ಹಂತದಲ್ಲಿ ಇದ್ದ ಶಿಸ್ತು, ಕರ್ತವ್ಯ ಪ್ರಜ್ಞೆ, ಸವಲತ್ತುಗಳು ದಿನಗಳೆದಂತೆ ರೋಗಿಗಳ ಸಂಖ್ಯೆ ಹೆಚ್ಚಾದಂತೆ ಮರೆಯಾಗುತ್ತಿದೆ. ಜನತೆ ಎಚ್ಚರ ತಪ್ಪಿದರೆ ಬೀದಿ ಹೆಣವಾಗುವುದರಲ್ಲಿ ಸಂಶಯವಿಲ್ಲ.

ಲಾಕ್ ಡೌನ್  ಮತ್ತು ಸೀಲ್ಡೌನಿಗಿಂತಲೂ ಪ್ರಭಲವಾದ ಅಸ್ತ್ರ ಕೋರೋನದ ವಿರುದ್ಧ ಅಂದರೆ ಅದುವೇ ಅರಿವು.

ನಿಮ್ಮ ಜವಾಬ್ದಾರಿಯನ್ನು ನೀವೇ ಹೊರಲು ಸಿದ್ದರಾಗಿ , ಸ್ವ ಸ್ವಚ್ಛತೆಗೆ ಆದ್ಯತೆಕೊಡಿ, ಸ್ವಚ್ಚತೆಗೆ ಬಡವ, ಶ್ರೀಮಂತ, ಮಧ್ಯಮವರ್ಗದವ ಎನ್ನುವ ತಾರತಮ್ಯ ಇಲ್ಲ ನಮ್ಮ ಸ್ವಚ್ಚತೆ ನಮ್ಮ ಕೈಲಿದೆ.

ಸಾಮಾಜಿಕ ಅಂತರ

ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಬೇಜವಾಬ್ದಾರಿ ಬೇಡ, ಮನೆಯಿಂದ ಹೊರಬಂದಾಗ ನಿಮ್ಮ ಎದುರಿಗೆ ಅಥವಾ ಅಕ್ಕ ಪಕ್ಕದಲ್ಲಿ ಇರುವ ವ್ಯಕ್ತಿ ನಿಮಗೆಷ್ಟೇ ಅತ್ಹ್ಮಿಯನಿರಬಹುದು, ನಿಮ್ಮ ಬಂದುವೇ ಆಗಿರಬಹುದು ಆರೋಗ್ಯಕರ ಅಂತರ ಅತಿಮುಖ್ಯ , ಯಾವುದೇ ವ್ಯಕ್ತಿಯ ಚಲನ ವಲನದ ಸಂಪೂರ್ಣ ಮಾಹಿತಿ ನಿಮಗಿರಲು ಸಾಧ್ಯವಿಲ್ಲ ಹಾಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ .



ಮಾಸ್ಕ ಬಳಕೆ

ಮಾಸ್ಕ  ಅಥವಾ ಮುಖ ಗವಸಿನ ಬಳಕೆ ಕ್ರಮಬದ್ದವಾಗಿದ್ದರೆ ಮಾತ್ರ ಅದು ನಿಮಗೆ ಶ್ರೀ ರಕ್ಷೆ , ಮಾಸ್ಕ ನಿಮ್ಮ ಮೂಗು ಮತ್ತು ಬಾಯಿ ಮುಚ್ಚುವಂತೆ ಇರಲಿ, ಕಾಟಾಚಾರದ ದರಿಸುವಿಕೆ ಬೇಡ, ಅದನ್ನು ಮೂಗು ಬಿಟ್ಟು ಬಾಯಿಗೆ ಮಾತ್ರ ಹಾಕುವುದು, ಕತ್ತು ಮುಚ್ಚುವಂತೆ ಧರಿಸುವುದು ಪೊಲೀಸ್ನವರು ಕಂಡಾಗ ಸರಿಯಾಗಿ ದರಿಸುವುದರಿನ್ದ ಪ್ರಯೋಜನವಿಲ್ಲ

.

ಕೈ ಮತ್ತು ಕಾಲುಗಳ ಸ್ವಚ್ಛತೆ

ಕೈ ಗಳನ್ನ ಸಾಬೂನು ಅಥವಾ ಸ್ಯಾನಿಟೈಸರ್ನಿಂದ ಆಗಾಗ ಸ್ವಚ್ಛಗೊಳಿಸಿ , ಅನಗತ್ಯವಾಗಿ ಕಣ್ಣು ಮೂಗು ಬಾಯಿ ಮುಟ್ಟುವುದನ್ನು ತಪ್ಪಿಸಿ, ಸಿಕ್ಕ ಸಿಕ್ಕ ವಸ್ತುಗಳನ್ನು ಮುಟ್ಟುವುದನ್ನು ನಿಲ್ಲಿಸಿ.

ಹೊರಗಿನಿಂದ ಬಂದಾಗ ಕೈ ಕಾಲುಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸಿ, ಇದರಿಂದ ರೋಗ ಹರಡುವುದನ್ನು ತಡೆಗಟ್ಟುವುದರಲ್ಲಿ ಬಹುತೇಕ ಯಶಸ್ವಿ ಆಗಬಹುದು .


ಹಣ್ಣು ತರಕಾರಿಯ ಸ್ವಚ್ಛತೆ

ಹಣ್ಣು ತರಕಾರಿಯ ಸ್ವಚ್ಛತೆ ಗೆ ಹೆಚ್ಚಿನ ಆದ್ಯತೆ ನೀಡಿ, ಮನೆಯಲ್ಲಿರುವ ವಸ್ತುಗಳನ್ನೇ ಬಳಸಿ ಸ್ವಚ್ಛಗೊಳಿಸಿ

ಉದಾ: ಉಪ್ಪು ಮತ್ತು ಅರಸಿನ ಬೆರೆಸಿದ ನೀರಿನಿಂದ ತೊಳೆಯಿರಿ.

ಅನಗತ್ಯವಾದ ತಿರುಗಾಟ ಬೇಡ.

ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿಸಲು ಆದ್ಯತೆ ನೀಡಿ.

ಅವಶ್ಯತೆಗಿಂತಲು ಮಿಗಿಲಾದ ವಸ್ತುಗಳ ಶೇಖರಣೆ ಬೇಡ .

ಇಂದು ನೀವು ಸುರಕ್ಷಿತವಾಗಿದ್ದಾರೆ ನಾಳೆ ಕೂಡ ನಿಮ್ಮದೇ ನೆನಪಿರಲಿ .

ಕೆಮ್ಮುವಾಗ ಸೀನುವಾಗ ಕರವಸ್ತ್ರ ಬಳಸಿ , ಆರೋಗ್ಯದ ವಿಷಯದಲ್ಲಿ ಉದಾಸೀನತೆ ಬೇಡ .

ಅಗತ್ಯ ವಿದ್ದಾಗ  ವೈದ್ಯರ ಸಂಪರ್ಕಿಸಲು ಹಿಂಜರಿಕೆ ಬೇಡ , ಕೋರೋನ ಜೊತೆಗೆ ಇತರ ಕಾಯಿಲೆಗಳ ಬಗ್ಗೆಯೂ ಜಾಗ್ರತೆ ವಹಿಸಿ, ನಿಮ್ಮ ಜೊತೆಗೆ ನಿಮ್ಮವರ ಕಾಳಜಿ ಕೂಡ ಇರಲಿ .

ಒಂದು ಕ್ಷಣದ ನಿರ್ಲಕ್ಷಕ್ಕೆ ಬಾರಿ ಬೆಲೆ ತೆರಬೇಕಾದೀತು .

ನಿಮ್ಮ ಅರೋಗ್ಯ ನಿಮ್ಮ ಕೈಯಲ್ಲಿ .

Post a Comment

0 Comments