ವಿಶ್ವದಲ್ಲಿ ವಿಜ್ಞಾನ  ತಂತ್ರಜ್ಞಾನ ಕ್ಷೇತ್ರಗಳಲ್ಲಿ ದಿನೇ ದಿನೇ ಅನೇಕ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ, ಅಂತಹ ಭವಿಷ್ಯದ ತಂತ್ರಜ್ಞಾನಗಳ ಬಗ್ಗೆ ಒಂದಿಷ್ಷ್ಟು ತಿಳಿಯೋಣ.

1)sweat powered smart watches/ ಸ್ವೇಟ ಪವರ್ಡ್ ಸ್ಮಾರ್ಟ್ ವಾಚಸ್

ಅಂದರೆ ಮಾನವನ ಬೆವರನ್ನ ಶಕ್ತಿಯನ್ನಾಗಿಸಿ ಬಳಸಿಕೊಂಡು ಚಲಿಸುವ ವಾಚ್ ಇದಾಗಿದೆ. ಇದನ್ನ ಗ್ಲ್ಯಾಸ್ಗೋ ಯೂನಿವೆರ್ಸಿಟಿಯ ಇಂಜಿನಿಯರ್ಗಳು ತಯಾರಿಸಿದ್ದಾರೆ ಇದರಲ್ಲಿ ಹೊಸ ಬಗೆಯ ಫ್ಲೆಕ್ಸಿಬಲ್ ಸೂಪರ್ ಕ್ಯಪಾಸಿಟರ್ ಬಳಸಲಾಗಿದ್ದು ಇದು ಮಾನವನ ಬೆವರನ್ನ ಉಪಯೋಗಿಸಿ ಶಕ್ತಿಯನ್ನ ಸಂಗ್ರಹಿಸುವುದಕ್ಕೆ ಬಳಸುತ್ತಾರೆ, ಇದು ಸಾಂಪ್ರದಾಯಿಕ ಬ್ಯಾಟರಿಗಳಲ್ಲಿನ ಎಲೆಕ್ಟ್ರೋಲೈಟೇನ ಕೆಲಸವನ್ನ ಮಾಡುತ್ತದೆ ಮತ್ತು ಇದರ ವಿಶೇಷತೆ ಅಂದರೆ ಇದು ಕೇವಲ ೨೦ ಮಿಕ್ರೋಲೈಟರ್ಗಳಷ್ಟು ಕಡಿಮೆ ದ್ರವ ಅಥವಾ ಬೆವರಿನಿಂದ ಸಂಪೂರ್ಣ ಚಾರ್ಜ್ ಮಾಡಬಹುದಾಗಿದೆ ಮತ್ತು ವಾಚ್ಚ್ನಲ್ಲಿ ಪಾಲಿಯೆಸ್ಟರ್ ಮತ್ತು ಸೆಲ್ಯುಲೋಸ್ ಬಟ್ಟೆಗಳನ್ನ ಬಳಸಲಾಗಿದ್ದು ಅದು ಸೂಪರ್ ಕ್ಯಾಪಸಿಟಾರ್ ಎಲೆಕ್ಟ್ರೋಡ್ ಆಗಿ ಕೆಲಸ ಮಾಡುತ್ತದೆ ಮತ್ತು ಇದು ಪರಿಸರ ಸ್ನೇಹಿ ವಾಚ್ ಆಗಿದೆ. ಮುಂದಿನ ದಿನಗಳಲ್ಲಿ ಈ ವಾಚ್ ಅನ್ನು ಮಾರುಕಟ್ಟೆಯಲ್ಲಿ ನೋಡಬಹುದು.


2) SELF HEALING “LIVING CONCRETE”/ ಸ್ವಗುಣಪಡಿಸುವ ಜೀವಂತ ಕಾಂಕ್ರೀಟ್

ಸ್ವಗುಣಪಡಿಸುವ ಜೀವಂತ ಕಾಂಕ್ರೀಟ್, ವಿಜ್ಞಾನಿಗಳು ಜೀವಂತ ಕಾಂಕ್ರೀಟನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಅದಕ್ಕೆ ಅವರು ಮರಳು, ಜೆಲ್ ಮತ್ತು ಬ್ಯಾಕ್ಟಿರಿಯವನ್ನ ಬಳಸಿದ್ದಾರೆ, ಇದು ಸ್ಟ್ರಕ್ಚರಲ್ ಲೋಡ್ ಬೇರಿಂಗ್ ಅಂದರೆ ರಚನಾತ್ಮಕ ಹೊಣೆ ಹೊರುವ ಶಕ್ತಿಯನ್ನ ಹೊಂದಿದ್ದು ಪರಿಸರ ಸ್ನೇಹಿ ಆಗಿದೆ ಏಕೆಂದರೆ ಅದು ಕಾಂಕ್ರೀಟ್ನ ಮೇಲೆ ಉಂಟಾಗುವ ಬಿರುಕುಗಳನ್ನ ಸ್ವತಃ ಸರಿಪಡಿಸುವ ಗುಣವನ್ನ ಹೊಂದಿದೆ ಅದರ ಜೊತೆಗೆ ಗಾಳಿಯಿಂದ ಅಪಾಯಕಾರಿ ವಿಷಗಳನ್ನ ಹೀರಿಕೊಳ್ಳುತ್ತದೆ ಮತ್ತು ತನ್ನ ಹೊಳಪನ್ನ ತಾನೇ ಹೆಚ್ಚಿಸಿಕೊಳ್ಳುತ್ತದೆ ಮುಂದಿನ ದಿನಗಳಲ್ಲಿ ವಿಧಾನ ಬಳಕೆಗೆ ಬಂದರೆ ವಾತಾವರಣದಲ್ಲಿರುವ ಮಾಲಿನ್ಯವನ್ನ ತಡೆಗಟ್ಟುವಲ್ಲಿ ತುಂಬಾ ಸಹಕಾರಿ ಆಗಲಿದೆ.


3) TACTILE VIRTUAL  REALITY/ ಟ್ಯಾಕ್ಟಿಲ್ ವರ್ಚುಯಲ್ ರಿಯಾಲಿಟಿ

ಟ್ಯಾಕ್ಟಿಲ್ ವರ್ಚುಯಲ್ ರಿಯಾಲಿಟಿ ಇದನ್ನ ನಾರ್ತ್ ವೆಸ್ಟೆರ್ನ್ ಯೂನಿವರ್ಸಿಟಿಯ ಸಂಶೋಧಕರು ಅಭಿವೃದ್ಧಿ ಪಡಿಸಿದ್ದು ಎಪಿಡರ್ಮಲ್ ಸಾದನವನ್ನ ಚರ್ಮಕ್ಕೆ ಸ್ಪರ್ಶಿಸಿದಾಗ ಅದರೊಂದಿಗೆ ಬೇರೊಂದು ಕಡೆಯಲ್ಲಿರುವ ವ್ಯಕ್ತಿ ಕಂಪ್ಯೂಟರ್ ಪರದೇ ಮೇಲೆ ಅಥವಾ ಗೆಸ್ಟುರೆ ಮೇಲೆ ಕೈಯಾಡಿಸಿದರೆ ಇನ್ನೊಂದೆಡೆ ಇರುವ ವ್ಯಕ್ತಿಯ ಸ್ಪರ್ಶ ಜ್ಞಾನವನ್ನ ಪಡೆಯಬಹುದು.

ಉದಾ: ಮನೆಯಲ್ಲಿರುವ ಮಗುವನ್ನ ಬೇರೆಡೆ ಇರುವ ತಾಯಿ ಸಾಧನದ ಮೂಲಕ ಸ್ಪರ್ಶಿಸುವ ಅನುಭವವನ್ನ ಪಡೆಯಬಹುದು.


4) HEART MONITORING T-SHIRT/ ಹಾರ್ಟ್ ಮಾನಿಟರಿಂಗ್ ಟಿ ಶರ್ಟ್

ಹಾರ್ಟ್ ಮಾನಿಟರಿಂಗ್ ಟಿ ಶರ್ಟ್ , ಆಗ ಸಾಕಷ್ಟು ಸಾಧನಗಳು , ಸ್ಮಾರ್ಟ್ ಬ್ಯಾಂಡ್ಗಳು ನಿಮ್ಮ ಹಾರ್ಟ್ ಅಥವಾ ಹೃದಯದ ಕಾರ್ಯ ಕ್ಷಮತೆಯನ್ನ ನೋಡಿಕೊಳ್ಳಲು ಬಳಕೆ ಆಗ್ತಾ ಇದೆ ಇದರ ಜೊತೆಗೆ ಈಗ ಹಾರ್ಟ್ ಮಾನಿಟರಿಂಗ್ ಟಿ ಶರ್ಟ್ಗಳು ಸಹ ಮಾರುಕಟ್ಟೆಗೆ ಲಗ್ಗೆ ಇಡುವುದಕ್ಕೆ ರೆಡಿ ಆಗಿವೆ. ಸಿ ಜಿ ಪ್ರಿಂಟ್ ಇರುವ ಟಿ ಶರ್ಟ್ ದರಿಸೋದರಿಂದ ಹೃದಯದ ಕಾರ್ಯದ ಸಂಪೂರ್ಣ ಮಾಹಿತಿ ನಿಖರವಾಗಿ ದಾಖಲಿಸುವುದರ ಜೊತೆಗೆ ಬ್ಲೂಟೂತ್ ಮೂಲಕ ಕ್ಲೌಡ್ ನಲ್ಲಿ ಡೇಟಾ ಅಪ್ಲೋಡ್ ಮಾಡಬಹುದು.


5) FLOATING FARMS/ ಫ್ಲೋಟಿಂಗ್ ಫಾರ್ಮ್

ಯುನೈಟೆಡ್ ನೇಷನ್ ರಿಪೋರ್ಟ್ ಪ್ರಕಾರ 2050 ಹೊತ್ತಿಗೆ ವಿಶ್ವದಲ್ಲಿ ಆಹಾರದ ಕೊರತೆ ಕಾಡಬಹುದು ಹಾಗಾಗಿ ಉತ್ಪಾದನಾ ಸಾಮರ್ತ್ಯವನ್ನ ಹೆಚ್ಚಿಸಲು ಫ್ಲೋಟಿಂಗ್ ಫಾರ್ಮ್ ಅಂದರೆ ತೇಲುವ ಕೃಷಿ ಮಾದರಿಯನ್ನ ಜೇವಿಯರ್ ಎಂಬ ಅರ್ಚಿಟೆಕ್ಟ್ ಮುಂದಾಗಿದ್ದಾರೆ ಅವರ ಪ್ರಕಾರ ಸಮುದ್ರಗಳು ಅಥವಾ ಒಳನಾಡಿನ ಸರೋವರಗಳಲ್ಲಿ ಇದನ್ನ ಅಭಿವೃದ್ಧಿ ಪಡಿಸ ಬಹುದಾಗಿದೆ ಇದು ಮೂರು ಹಂತದ ವಿನ್ಯಾಸವನ್ನ ಹೊಂದಿದ್ದು 24ಮೀ ಎತ್ತರವಾಗಿರುತ್ತೆ ಮೇಲಿನ ಹಂತದಲ್ಲಿ ಸೌರ ಪ್ಯಾನೆಲ್ ಅಳವಡಿಸಬಹುದಾಗಿದ್ದು ಅದು ಎನರ್ಜಿ ಸಪ್ಲೈ ಗೆ ಬಳಕೆ ಆಗುತ್ತದೆ ಮದ್ಯದ ಹಂತದಲ್ಲಿ ತರಕಾರಿಗಳನ್ನ ಬೆಳೆಯಬಹುದು ಅದು ಮಣ್ಣನ್ನು ಬಳಸದೆ ಕೇವಲ ದ್ರವ ರೂಪದ ಪೋಷಕಾಂಶಗಳಿಂದ ಬೆಳೆಸಬಹುದಾಗಿದ್ದು ಪೋಷಕಾಂಶಗಳು ಮತ್ತು ಸಸ್ಯ ಜನ್ಯ ಪದಾರ್ಥಗಳು ಕೆಳಗೆ ಇರುವ ಮೀನುಗಳಿಗೆ ಆಹಾರವಾಗುತ್ತದೆ ಹೀಗೆ ಒಂದು ಸ್ಮಾರ್ಟ್ ಫ್ಲೋಟಿಂಗ್ ಫಾರ್ಮ್ 350 X 200ಮೀ ವಿಸ್ತೀರ್ಣವಾಗಿದ್ದರೆ ಅದರಿಂದ ಸುಮಾರು 8.1 ಟನ್ ತರಕಾರಿ ಮತ್ತು 1.7 ಟನ್ ಮೀನನ್ನು ಒಂದು ವರ್ಷಕ್ಕೆ ಬೆಳೆಯಬವುದಾಗಿದ್ದು ಮಾದರಿ ಅಭಿವೃದ್ಧಿಯಾದರೆ ಕೃಷಿಯಲ್ಲಿ ಕೂಡ ಕ್ರಾಂತಿಯನ್ನ ಮಾಡಬಹುದಾಗಿದೆ.


CLICK HEAR TO WATCH THE VIDEO