“ನೀವು ನಿಮ್ಮ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ”
ಈ ಮಾತನ್ನು ಕೆಳಿದಾಗ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲು ದೇಶಪ್ರೇಮ ಜಾಗ್ರತವಾಗುತ್ತದೆ, ಇದು ಭಾರತ ಮಾತೆಯ ವೀರ ಪುತ್ರ ಸುಭಾಸ್ ಚಂದ್ರ ಬೋಸ್ ರ ಘೋಷ ವಾಕ್ಯ.ಅವರೊಬ್ಬ ಕ್ರಾಂತಿಕಾರಿ ಅಪ್ಪಟ ದೇಶಪ್ರೇಮಿ, ಭಾರತಮಾತೆಯ ವೀರಪುತ್ರ ಅನ್ನುವುದರಲ್ಲಿ ಎರಡು ಮಾತಿಲ್ಲ, ಆದರೆ ಅವರದು ಮಾತ್ರ ದುರಂತ ಅಂತ್ಯ.
ಅವರ ಕೊನೆಯದಿನಗಳ ಮಾಹಿತಿ ಇಂದಿಗೂ ಅಸ್ಪಷ್ಟ ಮತ್ತು ಸಂಶಯಾಸ್ಪದ, ಜನಮಾನಸದಲ್ಲಿ ಉತ್ತರಗಳೇ ಸಿಗದ ಅನೇಕ ಪ್ರಶ್ನೆಗಳನ್ನ ಹಾಗೆಯೆ ಅಚ್ಚಳಿಯದಂತೆ ಉಳಿಸಿ ಮರೆಯಾದ ಮಾಣಿಕ್ಯ ಆತ.ಇದು ಉತ್ತರಗಳೇ ಸಿಗದ ನಿಮ್ಮ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಹಾಗು ಎಲ್ಲೂ ಕಂಡು ಕೇಳರಿಯದ ಅದೆಷ್ಟೋ ಕತೆಗಳನ್ನ ಅನಾವರಣ ಗೊಳಿಸುವ ಕಿರು ಪ್ರಯತ್ನ.
ನೇತಾಜಿ ಬೆಳೆದು ಬಂದ ರೀತಿಯೇ ಒಂದು ಹೋರಾಟ, ಭಾರತದ ಸ್ವಾತಂತ್ರ್ಯ ಅವರ ಹೋರಾಟದ ಫಲ, ಯಾರಿಗೂ ಬಗ್ಗದ, ಹೆದರದ ಆಂಗ್ಲರು ನೇತಾಜಿಗೆ ಹೆದರಿದ್ದರು
ಅಂದು 1947 ಭಾರತ ಸ್ವಾತಂತ್ರ್ಯಗೊಂಡ ಸಂದರ್ಭದಲ್ಲಿ ಆಗ ಬ್ರಿಟನ್ ನ ಪ್ರಧಾನಿಯಾಗಿದ್ದವರು ಸರ್ ಸೀಮನ್ ಅಟಲೀ, ಇದಾದ ನಂತರ 1956ರಲ್ಲಿ ಅಟಲೀ ಪ್ರಥಮಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಾರೆ ಅಂದು ಅವರನ್ನ ಆದರದಿಂದ ಸ್ವಾಗತಿಸಿದವರು ಅಂದಿನ ಗವರ್ನರ್ ಪಣಿಭೂಷಣ್ ಚಕ್ರವರ್ತಿ. ಅವರ ಸಂವಾದದ ನಡುವೆ ಪಣಿಭೂಷಣ್ ಒಂದು ಪ್ರಶ್ನೆಯನ್ನ ಅಟಲೀ ಅವರಿಗೆ ಕೇಳ್ತಾರೆ. " ನೀವು ಯಾವ ಕಾರಣಕ್ಕಾಗಿ ಭಾರತಕ್ಕೆ ಸ್ವಾತಂತ್ರ್ಯ ನೀಡಿದ್ದಿರೋ ಇದರಲ್ಲಿ ಗಾಂಧೀಜಿಯವರ ಪಾತ್ರ ಎಷ್ಟು ?"
ಅಟಲೀ ಉತ್ತರಿಸಿದ್ರು --- ಅತ್ಯಲ್ಪ---- ಹೌದು ತೀರಾ ಕಡಿಮೆ
ಇದು ಸತ್ಯ !, ಅಟಲೀ ಅಲ್ಲಿ ಸುಳ್ಳು ಹೇಳಲಿಲ್ಲ ನಿಜವನ್ನೇ ಹೇಳಿದ್ದರು ಗಾಂಧೀಜಿಯ ಪಾತ್ರ ಅತ್ಯಲ್ಪ ಎಂಬುದು ಅವರು ಕೊಟ್ಟ ಸ್ವಹೇಳಿಕೆ ಆಗಿತ್ತು.
2ನೆ ಮಹಾಯುದ್ಧದಲ್ಲಿ ಭಾಗವಹಿಸಿದ ದೇಶಗಳು ಅಂದರೆ ಆಕ್ಸಿಸ್ ಮತ್ತು ಆಲಿಯನ್ಸ್ ರಾಷ್ಟ್ರಗಳಲ್ಲಿ ಯಾವ ರಾಷ್ಟ್ರವು ಕೂಡ ಭಾರತದಂತ ದೊಡ್ಡ ರಾಷ್ಟ್ರವನ್ನು ಆಳುವ ಸಾಮರ್ತ್ಯವನ್ನ ಹೊಂದಿರಲಿಲ್ಲ. ಆದ್ದರಿಂದ್ಲೇ ಆಂಗ್ಲರು ತಾವು ಆಕ್ರಮಿಸಿಕೊಂಡು ಆಳುತ್ತಿದ್ದ ಹಲವಾರು ರಾಷ್ಟ್ರಗಳನ್ನ 1946 ರಿಂದ ಹಂತ ಹಂತವಾಗಿ ಸ್ವತಂತ್ರ ಗೊಳಿಸುತ್ತ ಬಂದರು.
ಈಗ ಯೋಚಿಸಬೇಕಾದ ವಿಷಯ ಅಂದರೆ ಭಾರತ ಹೊರತುಪಡಿಸಿ ಯಾವುದಾದರು ದೇಶ ಮಹಾತ್ಮಾ ಗಾಂದಿಯವರನ್ನ ಹೊಂದಿತ್ತಾ?
ಇಲ್ಲ !
ಆದರೂ ಕೂಡ ಅವರೆಲ್ಲರೂ ಸ್ವತಂತ್ರರಾದರು
ಇದಕ್ಕೆ ಕಾರಣ ಏನು ?
CLICK HERE TO SEE THE VIDEO IN KANNADA
ಇಂದಿಗೂ ಅನೇಕ ಇತಿಹಾಸ ಕಾರರ ಪ್ರಕಾರ ಈ ಎಲ್ಲ ದೇಶಗಳಿಗೆ ಸ್ವಾತಂತ್ರ್ಯ ನೀಡಿದ್ದಲ್ಲ ಅದು ಅವರು ಪಡೆದುಕೊಂಡದ್ದು
ಈಗ ಒಂದು ವಿಚಾರ ನಿಮ್ಮ ತಲೆಯಲ್ಲಿ ಓಡುತ್ತಿರಬಹುದು " ಹಿಟ್ಲರ್ ಅಥವಾ ಗಾಂಧೀಜಿಯ ಹೋರಾಟದ ಫಲಶ್ರುತಿ ಇದು ಎಂದು, ಆದರೆ ಅಟಲೀ ಮತ್ತು ಆಂಗ್ಲರು ಯಾವುದಾದರು ವ್ಯಕ್ತಿ ಅಥವಾ ಶಕ್ತಿಯ ಬಗ್ಗೆ ಭಯ ಪಡುತ್ತಿದ್ದರೇ ಅದು ಕೇವಲ" ಸುಭಾಸ್ ಚಂದ್ರ ಬೋಸ್ ".
ಈ ಮಾತನ್ನ ಸ್ವತಃ ಅಟ್ಟಲೀಯವರೇ ಹೇಳಿದ್ದರು 18ನೆ ಶತಮಾನದಲ್ಲಿ ಆಂಗ್ಲರು ಭಾರತದ ಮೇಲೆ ಸಂಪೂರ್ಣ ಹಿಡಿತಹೊಂದಿದ್ದರು. ಅದು ಆಂಗ್ಲರು ಅತ್ಯಂತ ಪ್ರಭಲರಾಗಿದ್ದ ಕಾಲ.
ಸ್ವಾತಂತ್ರ್ಯದ ಯಾವುದೇ ಆಲೋಚನೆ ಇಲ್ಲದ ಸಮಯ ಅದು , ಇನ್ಕ್ವಿಲಾಬ್ ಎಂಬ ಕೂಗು ಸಹ ಎಲ್ಲಿಯೂ ಕೇಳಿಬರುತ್ತಿರಲಿಲ್ಲ.
ಆಗ 1897 ಜನವರಿ 23 ರಂದು ಒರಿಸ್ಸಾದ ದಂಪತಿಗಳಿಗೆ ಗಂಡು ಮಗುವಿನ ಜನನವಾಯಿತು, ಅವರೇ ಸುಭಾಸ್ ಚಂದ್ರ ಬೋಸ್ , ತಾಯಿ ಪ್ರಭಾವತಿ ದತ್ತ್, ತಂದೆ ಜಾನಕೀನಾಥ್ ಬೋಸ್ ವೃತ್ತಿಯಲ್ಲಿ ವಕೀಲರು ಅವರದು ಒರಿಸ್ಸಾದಲ್ಲಿ ಒಂದು ಗೌರವಾನ್ವಿತ ಕುಟುಂಬ.
ಸುಭಾಸ್ ಚಂದ್ರ ಭೋಸ್ ಒಬ್ಬ ಅಪ್ಪಟ ದೇಶ ಭಕ್ತ, ಅವರು ತನ್ನ ತಾಯಿ ನೆಲವನ್ನು ತನ್ನ ತಾಯಿಯಷ್ಟೇ ಪ್ರೀತಿಸುತ್ತಿದ್ದರು ಹಾಗು ಅವರ ಜೀವನವನ್ನ ತಾಯಿ ಭಾರತಿಗೆ ಮುಡಿಪಾಗಿಟ್ಟು ತಾಯಿನೆಲಕ್ಕೆ ಸಮರ್ಪಿಸಿದರು , ಅವರ ಬಗ್ಗೆ ಒಂದು ಮುಖ್ಯವಾದ ವಿಷಯ ಅಂದರೆ ಅವರು ನಾಗರೀಕ ಸೇವಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದರು ಆದರೆ ಆ ಕೆಲಸವೂ ಕೂಡ ಅವರಿಗೆ ತೃಪ್ತಿದಾಯಕವಾಗಿರಲಿಲ್ಲ ಕೊನೆಗೆ ಆ ಕೆಲಸವನ್ನು ತ್ಯಜಿಸಿ, ತನ್ನ ತಾಯ್ನಾಡಿನ ಏಳಿಗೆಗೆ ತನ್ನದೇ ಆದ ರೀತಿಯಲ್ಲಿ ದುಡಿಯಲು ತೀರ್ಮಾನಿಸಿದರು. ಬೋಸ್ ಚಿಕ್ಕಂದಿನಿಂದಲೂ ಕ್ರಾಂತಿಕಾರಿ ಮನೋಭಾವದವರು, ಆಂಗ್ಲರ ದಬ್ಬಾಳಿಕೆ ನೋಡಿದಾಗಲೆಲ್ಲ ಅವರ ಭಾಷೆಯಲ್ಲೇ ತಕ್ಕ ಉತ್ತರ ನೀಡುತ್ತಿದ್ದರು, ಇದೆ ಗುಣ ಗಾಂಧೀಜಿ ಮತ್ತು ಬೋಸ್ ಮದ್ಯೆ ಇದ್ದ ದೊಡ್ಡ ವ್ಯತ್ಯಾಸವಾಗಿತ್ತು.
ಗಾಂಧೀಜಿ ಸ್ವಾತಂತ್ರ್ಯವನ್ನು ಅಹಿಂಸೆಯ ಮೂಲಕ ಪಡೆಯಲು ಬಯಸಿದ್ದರು, ಅಹಿಂಸೆ ಗಾಂಧೀಜಿಯ ಅಸ್ತ್ರವಾಗಿತ್ತು ಆದರೆ ನೇತಾಜಿಯ ಚಿಂತನೆ ಇದಕ್ಕೆ ವಿರುದ್ಧವಾದುದು ಅವರು ಸ್ವಾತಂತ್ರ್ಯವನ್ನು ಯಾವ ರೀತಿಯಿಂದಾದರೂ ಪಡೆಯಲು ಬಯಸಿದ್ದರು ಗಾಂಧೀಜಿಯ ಅಹಿಂಸೆಯ ಮಾರ್ಗದಲ್ಲಿ ಅಷ್ಟು ನಂಬಿಕೆ ಇದ್ದಂತೆ ಇರಲಿಲ್ಲ, ಅವರ ಯೋಚನಾ ಲಹರಿ ಚಾಣಕ್ಯನಂತಿತ್ತು.
ಶತ್ರುವಿನ ಶತ್ರು ಮಿತ್ರ ಎಂಬ ನಂಬಿಕೆ ನೇತಾಜಿಯದ್ದು, ಅದಕ್ಕಾಗಿಯೇ ಅವರು ಜರ್ಮನಿ ಮತ್ತು ಜಪಾನಿನೊಂದಿಗೆ ಸ್ನೇಹ ಬೆಳೆಸಿದ್ದರು. ಬೋಸ್ ಗೆ ಬೇಕಾಗಿದ್ದು ತನ್ನ ತಾಯಿನೆಲದ ಖುಷಿ ಮಾತ್ರ ಅದಕ್ಕಾಗಿ ಅವರು ರಾಜಕೀಯ ಸೇರುವ ನಿರ್ಧಾರ ಮಾಡಿದರು, ಅಲ್ಲಿಯೂ ಕೂಡ ತನ್ನ ತಾಯ್ನೆಲದ ಏಳಿಗೆಗಾಗಿ ದುಡಿದರು ಇದು ಆಂಗ್ಲರ ಕಣ್ಣು ಕೆಂಪಾಗಿಸಿತ್ತು ಇದೆ ಕಾರಣಕ್ಕಾಗಿ ಅವರನ್ನು ಹನ್ನೊಂದು ಭಾರಿ ಜೈಲಿಗೆ ಅಟ್ಟಲಾಯಿತು. ಆದರೆ ನೇತಾಜಿಯ ಪ್ರತಿನಡೆಯು ಆಂಗ್ಲರ ಉಸಿರುಗಟ್ಟಿಸುತಿತ್ತು, ಬೋಸ್ ಆಗ ಬಿಸಿ ರಕ್ತದ ಯುವಕ, ಆಂಗ್ಲರಿಗೆ ಪರಿಸ್ಥಿತಿಯ ಅರಿವಾಗಿತ್ತು , ಈ ಯುವಕನಿಂದ ನಮಗೆ ಆಪತ್ತು ತಪ್ಪಿದ್ದಲ್ಲ, ಹೇಗಾದರೂ ಮಾಡಿ ಇವನ ಕಥೆ ಮುಗಿಸ ಬೇಕು ಅದು ಮೃತ್ಯುವಿನ ಮೂಲಕ ಅಥವಾ ಬೇರೆ ಯಾವುದೇ ರೂಪದಲ್ಲಿಯೂ ಆಗಿರಬಹುದು. ಆದರೆ ನೇತಾಜಿಗೆ ಆಂಗ್ಲರ ಈ ಸಂಚಿನ ಅರಿವಾಗಿತ್ತು, ಹಾಗಾಗಿ 1940 ರಲ್ಲಿ ತನ್ನ ಅಣ್ಣನ ಸಹಾಯದಿಂದ ಅಫಘಾನಿಸ್ತಾನದ ಮೂಲಕ ರಷ್ಯಾಕ್ಕೆ ತೆರಳಿದರು ಅಲ್ಲಿ ಅಂದಿನ ರಷ್ಯಾದ ನಾಯಕ ಜೋಸೆಫ್ ಸ್ಟೈಲಿನ್ ನ ಭೇಟಿ ಮಾಡಿದರು.
ಆ ಸಂದರ್ಭದಲ್ಲಿ ನೇತಾಜಿ ಜೋಸೆಫ್ ಗೆ ಹೇಳಿದ ಮಾತು " ನೀವು ನನ್ನ ಶತ್ರುವಿನ ಶತ್ರು, ಹಾಗಾಗಿ ನನ್ನ ಮಿತ್ರ" ನಂತರ ಸ್ಟೈಲಿನ್ ನ ಸಹಾಯದಿಂದ ಜೆರ್ಮನಿಗೆ ಪ್ರಯಾಣ ಬೆಳೆಸಿದರು, ಆಗ ಜೆರ್ಮನಿಯ ಕರೆನ್ಸಿಯನ್ನು ಕೂಡ ಜೋಸೆಫ್ ವ್ಯವಸ್ಥೆ ಮಾಡಿದ್ದರು.
ಜೆರ್ಮನಿಯಲ್ಲಿ ಹಿಟ್ಲರ್ ನನ್ನ ಭೇಟಿಯಾದರು, ಅಂದು ಹಿಟ್ಲರ್ ಜೆರ್ಮನಿಯ ಪ್ರಶ್ನಾತೀತ ನಾಯಕ ಹಿಟ್ಲರ್ರ್ನೊಂದಿಗೆ ಬೋಸ್ ಗೆ ಒಳ್ಳೆಯ ಸ್ನೇಹವಿತ್ತು, ಹಿಟ್ಲರ್ ನೇತಾಜಿಯ ಸಹಾಯಕ್ಕೆ ನಿಂತರು.
ಭಾರತದಿಂದ ದೂರಾದ ನಂತರದ ದಿನಗಳಲ್ಲಿ ಕೂಡ ತಾಯಿನಾಡಿನಿಂದ ದೂರವಿದ್ದು ತನ್ನ ದೇಶದ ಸ್ವಾತಂತ್ರ್ಯಕ್ಕಾಗಿ ಬೋಸ್ ತಯಾರಿ ನಡೆಸುತ್ತಿದ್ದರು, ಎರಡನೇ ಮಹಾಯುದ್ಧದ ಯುದ್ಧಕೈದಿಗಳನ್ನ ಸೇರಿಸಿ ಅಜಾದ್ ಹಿಂದ್ ಪೌಜ್ ನ್ನು ಕಟ್ಟುವ ತಯಾರಿಯಲ್ಲಿದ್ದರು, ಹಿಟ್ಲರ್ ನೊಂದಿಗೆ ಮಾತನಾಡಿ ಯುದ್ಧ ಕೈದಿಗಳನ್ನ ಬಂಧನದಿಂದ ಬಿಡಿಸಿ ತನ್ನ ಅಜಾದ್ ಹಿಂದ್ ಪೌಜ್ ಗೆ ಸೇರಿಸಿಕೊಂಡರು.
ಆದರೆ ಭಾರತದಲ್ಲಿ ನೇತಾಜಿ ಎಲ್ಲಿದ್ದಾರೆ ಎನ್ನುವ ಚಿಕ್ಕ ಸುಳಿವು ಕೂಡ ಯಾರೊಬ್ಬರಿಗೂ ತಿಳಿದಿರಲಿಲ್ಲ ಅವರ ಅಣ್ಣನನ್ನು ಹೊರತುಪಡಿಸಿ. ಬೋಸ್ ಎಲ್ಲಿ ಎನ್ನುವ ಪ್ರಶ್ನೆ ಎಲ್ಲರನ್ನ ಕಾಡುತಿತ್ತು ಆದರೆ ನೇತಾಜಿಗೆ ಯಾರ ಕಣ್ಣಿಗಾದರು ಮಣ್ಣೆರಚಿ ಬೂಗತರಾಗುವ ಕಲೆ ಕರಗತವಾಗಿತ್ತು.
ವಿದೇಶಿ ನೆಲದಲಿದ್ದುಕೊಂಡೆ ಆಂಗ್ಲರ ವಿರುದ್ಧ ಹೋರಾಡಲು ಬಲಿಷ್ಠವಾದ ಅಜಾದ್ ಹಿಂದ್ ಪೌಜ್ ನ್ನು ಕಟ್ಟಿದರು, ಅದುವೇ ಭಾರತೀಯ ರಾಷ್ಟ್ರೀಯ ಸೇನೆ ಅಥವಾ ಐ .ಏನ್. ಏ.
ಮೂಲಗಳ ಪ್ರಕಾರ ಐ.ಏನ್.ಏ ಯಲ್ಲಿ ಸುಮಾರು 55,000 ಸೈನಿಕರಿದ್ದರು .
ಈಗ ನೇತಾಜಿ ಜನತೆಯ ಮುಂದೆ ಬರುವ ಸಮಯವಾಗಿತ್ತು, ಅದಕ್ಕಾಗಿ ಅವರು ಬರ್ಲಿನ್ನ ರೇಡಿಯೋ ಸ್ಟೇಷನ್ನಿಂದ ಮಾತನಾಡಲು ನಿರ್ಧರಿಸಿದರು.
ಅವರ ಮಾತು ಇದಾಗಿತ್ತು " ನಾನು ಸುಭಾಸ್ ಚಂದ್ರ ಬೋಸ್ , ನಾನು ಜೀವಂತವಾಗಿದ್ದ್ದೆನೆ !"
ಈ ಧ್ವನಿಯನ್ನು ಕೇಳುತಿದ್ದಂತೆ ಕೋಟ್ಯಂತರ ಭಾರತೀಯರ ಆನಂದ ಉಕ್ಕಿ ಹರಿದಿತ್ತು, ಜನತೆ ಇದನ್ನ ದೀಪಾವಳಿಯಂತೆ ಸಂಭ್ರಮಿಸಿದ್ದರು.
ಇದು ಆಂಗ್ಲರನ್ನ ಎದುರಿಸುವ ಸಮಯ ಆದರೆ ಕೇವಲ ಜೆರ್ಮನಿಯ ಸಹಾಯದಿಂದ ಅದು ಸಾದ್ಯವಿರಲಿಲ್ಲ, ಅದಕ್ಕಾಗಿ ಬೋಸ್ ಆಂಗ್ಲರ ಇನ್ನೊಬ್ಬ ಶತ್ರುವಿನಿಂದ ಸಹಾಯ ಪಡೆಯಲು ಮುಂದಾದರು ಅದುವೇ ಜಪಾನ್.
ಜಪಾನಿಯರು ಬೋಸ್ ರನ್ನ ಜೆರ್ಮನಿ ಮತ್ತು ರಷ್ಯಾಕ್ಕಿಂತಲೂ ಆದರಿಂದ ಸ್ವಾಗತಿಸಿದರು, ಸ್ವಂತ ತಮ್ಮನಂತೆ ಪ್ರೀತಿಸಿದರು , ಹೀಗಿರುವಾಗ ಅಂದಿನ ಜಪಾನಿನ ಪ್ರಧಾನಿ 16 ಜೂನ್ 1943 ರಂದು ಸಂಸತ್ತಿನಲ್ಲಿ ಒಂದು ಘೋಷಣೆ ಮಾಡುತ್ತಾರೆ "ಭಾರತದ ಸ್ವಾತಂತ್ರ್ಯಕ್ಕಾಗಿ ಜಪಾನ್ ಎಲ್ಲ ರೀತಿಯಲ್ಲೂ ಸಹಾಯ ಮಾಡಲು ಸಿದ್ಧವಿದೆ"ಅದಲ್ಲದೆ ಜಪಾನ್ ಮ್ಯಾನ್ಮಾರ್ ಮೂಲಕ ಬ್ರಿಟಿಷ್ ಇಂಡಿಯಾವನ್ನ ಮುತ್ತಿಗೆ ಹಾಕಲು ನಿರ್ಧರಿಸಿತ್ತು. ಈ ಹೊತ್ತಿಗಾಗಲೇ ನೇತಾಜಿ ಸ್ವತಂತ್ರ ಭಾರತದ ಉಜ್ವಲ ಭವಿಷ್ಯಕ್ಕಾಗಿ ಒಂದು ಪ್ರಗತಿಯ ನಕ್ಷೆಯನ್ನು ಸಿದ್ದಪಡಿಸಿದ್ದರು ಅದರಲ್ಲಿ ಸ್ವಾತಂತ್ರ್ಯ ನಂತರದ ನವ ಭಾರತದ ಅಭಿವೃದ್ದಿಗಾಗಿ ಹಲವು ಯೋಜನೆಗಳ ಜೊತೆ ಜೊತೆಗೆ ಕಾನೂನು ಸುವ್ಯವಸ್ಥೆ, ಭಾರತದಲ್ಲಿ ಯಾವ ಕರೆನ್ಸಿ ಚಲಾವಣೆಗೆ ತರಬೇಕು, ಪೊಲೀಸ್, ಮೂಲ ಸೌಕರ್ಯ, ಬಡವರ ಏಳಿಗೆ ಹೀಗೆ ಸಂಪೂರ್ಣ ನೀಲ ನಕಾಶೆಯನ್ನ ಸಿದ್ದಪಡಿಸಿದ್ದರು.
ಹೀಎಗೆ ಎಲ್ಲವೂ ಸರಿಯಾಗಿದ್ದರೆ 1944 ರಲ್ಲೇ ಭಾರತದಲ್ಲಿ ಆಂಗ್ಲರ ಯುಗಾಂತ್ಯವಾಗಬೇಕಿತ್ತು ಆದರೆ ಅದೃಷ್ಟ ಬೋಸ್ ಜೊತೆ ಇರಲೇ ಇಲ್ಲ, ಆ ವರ್ಷ ಮಳೆಗಾಲ ಬಹು ಬೇಗ ಆರಂಭಗೊಂಡಿತ್ತು ಹಾಗು ಜೂಲೈ ತಿಂಗಳಿನಲ್ಲಿ ಎರಡನೇ ಮಹಾಯುದ್ಧದಲ್ಲಿ ಜೆರ್ಮನಿಯ ಸೈನ್ಯ ಹಿನ್ನಡೆ ಅನುಭವಿಸಿತ್ತು ಮತ್ತು ಗಾಯಾಳುವಾಗಿತ್ತು ಇದರಿಂದಾಗಿ ಅನಿವಾರ್ಯವಾಗಿ ಜರ್ಮನಿ ಆಂಗ್ಲರ ವಿರುದ್ದದ ಹೋರಾಟದಿಂದ ಹಿಂದೆ ಸರಿಯುವ ಮನಸ್ಸು ಮಾಡಿತು.
ಇದು ನೇತಾಜಿಗೆ ಆದಂತ ದೊಡ್ಡ ಹಿನ್ನಡೆ, ಅವರ ಎಲ್ಲ ಯೋಜನೆಗಳು ಹಾಳಾಗಿತ್ತು, ಐ. ಏನ್. ಏ ಗೆ ಏಕಾಂಗಿಯಾಗಿ ಆಂಗ್ಲರನ್ನ ಎದುರಿಸುವ ಶಕ್ತಿ ಇರಲಿಲ್ಲ, ಇದರಿಂದಾಗಿ 24 ಆಗಸ್ಟ್ 1944 ರOದುಮುಂಜಾನೆ ರಂಗೂನ್ ರೇಡಿಯೋ ಸ್ಟೇಷನ್ನಿಂದ ಒಂದು ಪ್ರಕಟಣೆ ಹೊರಡಿಸಿದರು " ಆ ಯೋಜನೆ ವಿಫಲವಾಗಿದೆ! ಆದರೆ ಸ್ವಾತಂತ್ರ್ಯಕ್ಕಾಗಿ ಆಂಗ್ಲರ ವಿರುದ್ದದ ನಿಮ್ಮ ಹೋರಾಟ ನಿರಂತರವಾಗಿರಲಿ".
ಈಗ ಬೋಸ್ ಸ್ವಾತಂತ್ರ್ಯ ಹೋರಾಟಗಾರರ ದೃಷ್ಟಿಯಲ್ಲಿ ನಾಯಕರಾಗಿದ್ದರು, ಅದಲ್ಲದೆ ಸಾಮಾನ್ಯ ನಾಗರಿಕನ ಮನಸ್ಸಿನಲ್ಲೂ ಬೋಸ್ ನಾಯಕನಾಗಿ ಬಿಟ್ಟರು.
ನೇತಾಜಿಯ ಈ ಕರೆಯ ನಂತರ ಮೊದಲಿಗೆ ಬ್ರಿಟಿಷ್ ಭಾರತೀಯ ನೌಕಾಸೇನೆ ಮತ್ತು ನಂತರ ಎಲ್ಲ ಬ್ರಿಟಿಷ್ ಭಾರತೀಯ ಪಡೆಗಳು ಆಂಗ್ಲರ ವಿರುದ್ಧ ಧ್ವನಿ ಎತ್ತಲು ಶುರುಮಾಡಿದವು. "ನಾವು ಆಂಗ್ಲರಿಗಾಗಿ ಹೊರಡುವುದಿಲ್ಲ ಎಂದು ನಿರ್ದರಿಸಿದ್ದವು" ಮತ್ತು ಈಗಾಗಲೇ ನಡೆಯುತ್ತಿದ್ದ ಹೋರಾಟದಿಂದ ಹಿಂದೆ ಸರಿದವು. ಆದರೆ ಭಾರತೀಯ ನೌಕಾಪಡೆ ಒಂದು ಹೆಜ್ಜೆ ಮುಂದೆ ಹೋಗಿ ಬೋಸ್ ರ ಫೋಟೋವನ್ನ ತನ್ನ ಯುದ್ಧ ನೌಕೆಯಲ್ಲಿ ಲಗತ್ತಿಸಲು ಪ್ರಾರಂಭಿಸಿತು.
ಭಾರತೀಯ ಪಡೆಗಳ ಈ ನಡೆ ಮತ್ತು ವಿದೇಶದಿಂದಲೇ ಅವರನ್ನ ಹುರಿದುಂಬಿಸುವ ನೇತಾಜಿಯ ಈ ಪರಿ ಆಂಗ್ಲರ ಎದೆಯಲ್ಲಿ ನೇತಾಜಿಯ ಬಗ್ಗೆ ಭಯ ಮೂಡಿಸಿತ್ತು.
ಆಗಲೇ ಅಂತರ್ಯುದ್ಧದ ವಾಸನೆ ಆಂಗ್ಲರ ಮೂಗಿಗೆ ಬಡಿದಿತ್ತು, ಇದರಿಂದಾಗಿ ಅವರು ಭಾರತಕ್ಕೆ ಸ್ವಾತಂತ್ರ್ಯ ನೀಡುವುದಕ್ಕೆ ಯೋಚಿಸಲು ಪ್ರಾರಂಭಿಸಿದರು.
ಇದೆಲ್ಲದರ ನಡುವೆ ಕೆಲವು ತಿಂಗಳುಗಳ ನಂತರ, ಅಧಿಕೃತ ಸುದ್ದಿ ಪತ್ರಿಕೆಯ ಪ್ರಕಾರ ಮತ್ತು ಬೇರೆ ಮಾಧ್ಯಮಗಳ ಮೂಲಕ 13, ಏಪ್ರಿಲ್ 1945, ರಂದು ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡಿದ್ದ, ಹಾಗು ಮೇ 1945, ರಲ್ಲಿ ಜರ್ಮನಿಯ ನಾಜಿ ಪಡೇ ಯುದ್ಧದಲ್ಲಿ ಸೋಲುಂಡಿತು ಅದೇವರ್ಷ ಅಮೇರಿಕಾ ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಪರಮಾಣು ಬಾಂಬ್ ದಾಳಿ ಮಾಡಿತು. ಈ ಘಟನೆ ಜಪಾನ್ ತನ್ನ ಮೊಣಕಾಲುಗಳ ಮೇಲೆ ನಿಲ್ಲುವಂತೆ ಮಾಡಿತ್ತು. ಜಪಾನ್ ಜರ್ಜರಿತವಾಗಿತು ಈಗ ಬ್ರಿಟನ್ ಮತ್ತು ಆಂಗ್ಲರ ಪಡೆ ಸಿಂಗಾಪುರ್, ಮಲೈ, ಥೈಲ್ಯಾಂಡ್ನ ಕಡೆಗೆ ತಿರುಗಿತ್ತು.
ಈ ಸಂದರ್ಭದಲ್ಲಿ ಬೋಸ್ ಸಿಂಗಾಪುರದಲ್ಲಿ ಇದ್ದರು ಈ ಘಟನೆ ನಡೆದ ಒಂದು ವಾರದ ನಂತರ ಬೋಸ್ ಥೈಲ್ಯಾಂಡ್ ನ ರಾಜಧಾನಿ ಬ್ಯಾಂಗ್ಕಾಕ್ ಗೆ ತೆರಳಿದರು. ಬ್ಯಾಂಗ್ಕಾಕ್ ನಲ್ಲಿ ಐ. ಏನ್. ಏ ಯಾ ಪ್ರದಾನ ಕಚೇರಿ ಇತ್ತು ಅಲ್ಲಿ ಅವರು ಜಪಾನ್ನ ಪ್ರತಿನಿಧಿ ಟೆಹ್ರಾರನ್ನ ಭೇಟಿ ಮಾಡ್ತಾರೆ ಆಗ ಅವರಿಗೆ ಜಪಾನ್ ಕೂಡ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದು ತಿಳಿಯುತ್ತೆ, ಆದರೆ ಇದು ಸ್ವಾಭಾವಿಕ ಜಪಾನ್ನ ಸ್ಥಿತಿ ಹಾಗಿತ್ತು.
ಈಗ ಏನೆ ಯೋಜನೆ ಮಾಡುವುದಿದ್ದರೂ ಬೋಸ್ ಒಬ್ಬರೇ ಮಾಡಬೇಕಿತ್ತು. ಕೆಲವು ಐ. ಏನ್. ಏ ಯ ಅಧಿಕಾರಿಗಳ ಪ್ರಕಾರ ಜಪಾನ್ ಪ್ರತಿನಿಧಿಯನ್ನು ಭೇಟಿಯಾದ ರಾತ್ರಿ ಬೋಸ್ ಅರೆಗಳಿಗೆಯೂ ಕಣ್ಣು ಮುಚ್ಚಿರಲಿಲ್ಲ ಮರುದಿನ ಅಂದರೆ 17, ಆಗಸ್ಟ್ 1945, ಬೆಳಿಗ್ಗೆ ಐ. ಏನ್. ಏಯ ವಿಮಾನದ ಮೂಲಕ ತನ್ನ ಕೆಲವೇ ಐ ಏನ್ ಏಯ ಅಧಿಕಾರಿಗಳೊಂದಿಗೆ ವಿಯೆಟ್ನಾಮ್ ಗೆ ತೆರಳಿದರು.
ಅಲ್ಲಿ ಅವರ ಎರಡನೇ ಯೋಜನೆ ಸಿದ್ದವಾಗಿತ್ತು ಈಗ ಬೋಸ್ ಒಬ್ಬರೇ ಜಪಾನ್ ನ ವಿಮಾನದಲ್ಲಿ ಪ್ರಯಾಣಿಸಲು ನಿರ್ಧರಿಸಿದ್ದರು ಅವರ ಪ್ರಕಾರ ಅದು ಸುರಕ್ಷಿತ ಎನ್ನುವುದಾಗಿತ್ತು . ಇದು ಅವರ ಯೋಜನೆಯ ಒಂದು ಭಾಗವಾಗಿತ್ತು ಆದರೆ ಅವರ ಸ್ನೇಹಿತರು ಅವರನ್ನ ಒಬ್ಬರೇ ಹೋಗಲು ಅನುಮತಿ ಕೊಡಲಿಲ್ಲ. ಆಗ ಬೋಸ್ ಜಪಾನೀ ಅಧಿಕಾರಿಗಳೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದರು.
ಅವರು ಹೇಳಿದ್ದು ಹೀಗಿತ್ತು " ಕರ್ನಲ್ ಹಬೀಬ್ ಉರ್ ರಹಮಾನ್ ನೀವು ನನ್ನ ಜೊತೆ ಬರಲು ಸಿದ್ದರಾಗಿ"
ಅರೆಕ್ಷಣವು ಯೋಚಿಸದೆ ಕರ್ನಲ್ ರಹಮಾನ್ ತಯಾರಾದರು, ಈಗ ಬೋಸ್ ಮತ್ತು ರಹಮಾನ್ ಜಪಾನಿನ ಯುದ್ಧ ವಿಮಾನದಲ್ಲಿ ಪ್ರಯಾಣ ಬೆಳೆಸಿದರು.
ಇಲ್ಲಿಯವರೆಗಿನ ಎಲ್ಲ ಬೆಳವಣಿಗೆಗಳು ಸ್ಪಷ್ಟವಾಗಿತ್ತು ಆದರೆ ಇದರ ನಂತರದ ಎಲ್ಲ ವಿದ್ಯಮಾನಗಳು ಅಸ್ಪಷ್ಟ ಮತ್ತು ಸಂಶಯಾಸ್ಪದವಾಗಿದ್ದವು, ಈ ಮಾತನ್ನ ನಾನು ಹೇಳ್ತಾ ಇಲ್ಲ ಇದೆಲ್ಲವೂ ಅಧಿಕೃತ ಪತ್ರಿಕೆ ಮತ್ತು ಮಾಧ್ಯಮಗಳ ಮೂಲಕ ವ್ಯಕ್ತವಾದವುಗಳು.
ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ ಹೊ ಚಿ ಮಿಯಾನ್ ನಿಂದ ಹೋರಾಟ ವಿಮಾನ ಸಂಜೆ ಸುಮಾರು 7, ಗಂಟೆಗೆ ವಿಯೆಟ್ನಾಮ್ ತಲುಪಿತ್ತು ಮತ್ತು ಆದಿನ ರಾತ್ರಿ ಅವರು ಅಲ್ಲೇ ತಂಗಿದ್ದರು ಮರುದಿನ ಬೆಳಗ್ಗೆ ತೈವಾನ್ ಗೆ ತಮ್ಮ ಪ್ರಯಾಣ ಬೆಳೆಸಿದ್ದರು ಅಲ್ಲಿಂದ ಮದ್ಯಾಹ್ನ 2 ಗಂಟೆಗೆ ತೈವಾನ್ ತಲುಪಿ ಅಲ್ಲಿಯೇ ಆಹಾರ ಸೇವಿಸಿ ಅಲ್ಲಿಂದ ಮರುದಿನ ಪ್ರಯಾಣಕ್ಕೆ ಸಿದ್ಧರಾಗುತ್ತಾರೆ ಯಾವಾಗ ವಿಮಾನ ರನ್ವೇ ಇಂದ ಹಾರಲು ಸಿದ್ಧವಾಗುತ್ತದೋ ಆಗ ಒಂದು ಘಟನೆ ಸಂಭವಿಸುತ್ತದೆ!.
ಜಪಾನಿನ ಯುದ್ಧ ವಿಮಾನ KI21 ರ ಎಡ ಭಾಗದ ಎಂಜಿನ್ ವಿಮಾನದಿನದ ಬೇರ್ಪಟ್ಟು ವಿಮಾನ ನೆಲಕ್ಕೆ ಅಪ್ಪಳಿಸುತ್ತದೆ ಬೋಸ್ ಸ್ಥಳದಲ್ಲೇ ಸಾವನ್ನಪ್ಪುತ್ತಾರೆ ಕರ್ನಲ್ ರಹಮಾನ್ ಕಾಲು ಜರ್ಜರಿತವಾಗುತ್ತದೆ.
ಕೆಲವೊಂದು ಅಧಿಕಾರಿಗಳ ಪ್ರಕಾರ ಎಂಜಿನ್ನಲ್ಲಿದ್ದ ಇಂಧನ ನೇತಾಜಿ ಕುಳಿತ ಸೀಟ್ ನ ತನಕ ಹರಿದಿತ್ತು ಮತ್ತು ಬೆಂಕಿ ಹತ್ತಿಕೊಂಡ ಕಾರಣದಿಂದಾಗಿ ಅವರ ಪ್ರಾಣ ಪಕ್ಷಿ ಸ್ಥಳದಲ್ಲೇ ಹಾರಿ ಹೋಗಿತ್ತು ಅವರು ಸಜೀವ ದಹನವಾಗಿದ್ದರು.
ಆದರೆ ರಹಮಾನ್ ಹೇಳಿಕೆಯ ಪ್ರಕಾರ, ನೇತಾಜಿ ಮತ್ತು ರಹಮಾನ್ ಜೊತೆಯಾಗಿಯೇ ಹೊರಬಂದರು ಅದಾಗಲೇ ನೇತಾಜಿಯ ಬಟ್ಟೆಗೆ ಮತ್ತು ದೇಹಕ್ಕೆ ಬೆಂಕಿ ಹತ್ತಿಕೊಂಡಿತ್ತು, ಆದರೆ ಕೆಲೆವೆ ಕ್ಷಣಗಳಲ್ಲಿ ವಿಮಾನ ನಿಲ್ದಾಣದ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಂದರು ಮೃತ ದೇಹ ಮತ್ತು ಗಾಯಾಳುಗಳನ್ನ ಮಿಲಿಟರಿ ಆಸ್ಪತ್ರೆಗೆ ಸೇರಿಸಿದರು ಅಲ್ಲಿ ಜಪಾನಿಯ ವೈದ್ಯರು ನೇತಾಜಿಯವರನ್ನ ಉಳಿಸಿಕೊಳ್ಳಲು ಶಕ್ತಿಮೀರಿ ಪ್ರಯತ್ನಿಸಿದರು ಆದರೆ 3,ನೇ ಹಂತದ ತೀವ್ರ ಸುಟ್ಟಗಾಯಗಳಿಂದಾಗಿ ಮೃತರಾದರು, ಭಾರತ ಮಾತೆಯ ವೀರ ಪುತ್ರನ ಯುಗ ಅಂತ್ಯವಾಯಿತು.
ಮರುದಿನ ಕರ್ನಲ್ ರಹಮಾನ್ ಅಧಿಕಾರಿಗಳೊಂದಿಗೆ ನಾನು ಬೋಸ್ ಅವರ ಪಾರ್ಥಿವ ಶರೀರವನ್ನ ಸಿಂಗಪುರಕ್ಕೆ ತೆಗೆದುಕೊಂಡು ಹೋಗಲು ಬಯಸುವುದಾಗಿ ಹೇಳಿದರು ಆದರೆ ಆ ಜಪಾನೀ ಅಧಿಕಾರಿಗಳ ಬಳಿ ಇನ್ನೊಂದು ವಿಮಾನದ ವ್ಯವಸ್ಥೆ ಮಾಡಲು ಸಾದ್ಯವಿರಲಿಲ್ಲ ಅದ್ಕಕಾಗಿ ವಿಷಾದ ವ್ಯಕ್ತ ಪಡಿಸಿದ್ದರು.
ಅದಾದ ಕೆಲವೇ ಕ್ಷಣಗಳಲ್ಲಿ ಮಾಧ್ಯಮದ ಪ್ರತಿನಿಧಿಗಳು ಘಟನಾ ಸ್ಥಳಕ್ಕೆ ಆಗಮಿಸಿದರು ಅವರು ಭಾರತದ ಮಹಾನ್ ಕ್ರಾಂತಿಕಾರಿ ನಾಯಕ, ಐ ಏನ್ ಏ ಯಾ ಸಂಸ್ಥಾಪಕ ಸುಭಾಷ್ ಚಂದ್ರ ಬೋಸ್ ರ ಅಂತಿಮ ಚಿತ್ರವನ್ನು ಸೆರೆ ಹಿಡಿಯಲು ಬಯಸಿದ್ದರು, ಅಂದು ಅದು ಅನಿವಾರ್ಯವಾಗಿತ್ತು ಕೂಡ , ಅದು ಘಟನೆ ಮತ್ತು ನೇತಾಜಿಯ ಮೃತ್ಯುವಿನ ಅತಿದೊಡ್ಡ ಸಾಕ್ಷಿಯಾಗಿರುತ್ತಿತ್ತು, ಆದರೆ ಕರ್ನಲ್ ರಹಮಾನ್ ಅದ್ಯಾವುದಕ್ಕೂ ಅವಕಾಶ ಕೊಡಲೇ ಇಲ್ಲ, ತನ್ನ ಅಗಲಿದ ನಾಯಕನ ಸುಟ್ಟ ಮುಖದ ಛಾಯಾ ಚಿತ್ರ ತೆಗೆಯಲು ನಾನು ಅನುಮತಿ ಕೊಡುವುದಿಲ್ಲ ನನ್ನ ದೇಶದ ಜನತೆಗೆ ಈ ಚಿತ್ರವನ್ನು ನೋಡಲು ದುಃಖವಾಗುತ್ತದೆ ಅದಕ್ಕೆ ನನ್ನ ಅನುಮತಿ ಎಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು.
ಅದೇ ದಿನ ರಾತ್ರಿ ನೇತಾಜಿಯ ಎಲ್ಲ ಅಂತಿಮ ವಿದಿ ವಿಧಾನಗಳು ಅಲ್ಲಿಯೇ ನಡೆಯಿತು, ಮೂಲಗಳ ಪ್ರಕಾರ ಕರ್ನಲ್ ರಹಮಾನ್ ಆ ರಾತ್ರಿಯಿಡಿ ತನ್ನ ಅಗಲಿದ ನಾಯಕನ ಚಿತೆಯ ಮುಂದಿನಿಂದ ಒಂದಿಂಚು ಅಲುಗಾಡಿರಲಿಲ್ಲ.
ಆದರೆ ಒಂದು ವಿಚಾರ ನೀವು ಗಮನಿಸಿದ್ದರೇ ನಾನು ಮೊದಲು ಹೇಳಿದ ವಿಚಾರಗಳಲ್ಲಿ ವಿಮಾನ ವಿಯೆಟ್ನಾಮ್ನಿಂದ ಹೋರಾಟ ನಂತರದ ಎಲ್ಲ ವಿದ್ಯಮಾನಗಳು ಅಸ್ಪಷ್ಟ, ಯಾರಿಗೂ ನಿಜವಾದ ವಿಷಯ ತಿಳಿದಿಲ್ಲ ಹಾಗಾಗಿ ಅಲ್ಲಿಂದ ನಂತರ ನಡೆದ ಎಲ್ಲ ವಿದ್ಯಮಾನಗಳು ಸಂಶಯಾಸ್ಪದ.
ಈಗ ಮತ್ತೆ ವಿಷಯಕ್ಕೆ ಬರೋಣ, ಈ ಘಟನೆಗಳು ನಡೆದ ಕೆಲ ದಿನಗಳ ನಂತರ ಜಪಾನೀ ಗೂಢಚಾರಿ ಒಬ್ಬರು ಐ ಏನ್ ಯ ಯಾ ಇಬ್ಬರು ಅದಿಕಾರಿಗಳನ್ನ ಬೇಟಿಮಾಡಿದ್ದರು ಅವರಿಬ್ಬರೂ ನೇತಾಜಿಯ ಆಪ್ತರಾಗಿದ್ದವರು, ಅವರೇ ಕರ್ನಲ್ ಪ್ರೀತಮ್ ಸಿಂಗ್ ಮತ್ತು ದೇವನಾಥ್ ಆ ಗೂಡಾಚಾರಿ ಅವರಲ್ಲಿ "ನೇತಾಜಿಯ ವಿಮಾನ ದುರಂತ ಮತ್ತು ಅವರ ಮರಣ ಅವೆಲ್ಲವೂ ಸುಳ್ಳು ಕಟ್ಟು ಕಥೆ ಅದನ್ನು ನಂಬೇಡಿ ಅಂದಿದ್ದರು", ಈಗ ದಿಗ್ಬ್ರಾಂತರಾಗುವ ಸರದಿ ಇವರದಾಗಿತ್ತು.
ಈಗ ಎಂದೂ ಕೊನೆ ಆಗದ ವಿವಾದ ಹುಟ್ಟಿಕೊಂಡಿದ್ದು ಇಲ್ಲಿಂದಲೇ, ಅಂದಿನ ತಕ್ಷಣದ ವೈಸರಾಯ್ ಫೀಲ್ಡ್ ಮಾರ್ಷಲ್ ವಿವೇಲ್ ತನ್ನ ಡೇರಿ ಅಲ್ಲಿ ಹೀಗೆ ಬರೀತಾರೆ " ನನಗ್ಯಾಕೋ ನೇತಾಜಿ ಮರಣ ವಿಮಾನ ಅಪಘಾತದಲ್ಲಿ ಆಗಿದೆ ಅಂದರೆ ನಂಬಲು ಸಾಧ್ಯವಾಗುತ್ತಿಲ್ಲ, ನನಗನ್ನಿಸುತ್ತಿದೆ ಅವರು ಮತ್ತೆ ನಮ್ಮೆಲ್ಲರ ಕಣ್ಣಿಗೆ ಮಣ್ಣೆರಚಿ ಮತ್ತೆ ಬೊಗತರಾಗಿದ್ದಾರೆ".
ಆದರೆ ದುರದೃಷ್ಟಕರ ವಿಚಾರ ಅಂದರೆ ನೇತಾಜಿಯ ಮರಣದ ವಿಚಾರದ ಚರ್ಚೆ ಭಾರತದಲ್ಲಿ ಅಥವಾ ಬಂಗಾಳದಲ್ಲಿ ನಡೆಯಲೇ ಇಲ್ಲ ಅದು ನಡಿತಿದ್ದಿದ್ದು ಅಮೇರಿಕಾ ಮತ್ತು ಬ್ರಿಟನ್ನಲ್ಲಿ. ಒಂದು ದಿನ ನೆಹರು ಅವರ ಪತ್ರಿಕಾಗೋಷ್ಠಿಯ ನಡುವೆ ಅಮೆರಿಕಾದ ಪ್ರತಿಷ್ಠಿತ ಪತ್ರಿಕೆಯ ವರದಿಗಾರ ನಾನು ನೇತಾಜಿಯವರನ್ನು ವಿಯೆಟ್ನಾಮ್ನಲ್ಲಿ ನೋಡಿರುವುದಾಗಿ ಹೇಳುತ್ತಾರೆ, ಇದಾದ ನಂತರದ ದಿನಗಳಲ್ಲಿ ಭಾರತೀಯ ಗುಪ್ತಚರ ಇಲಾಖೆ ತನ್ನ ತನಿಖೆಯನ್ನು ಶುರುಮಾಡಿತ್ತು. ಕರ್ನಲ್ ರಹಮಾನ್ರನ್ನ ವಿಚಾರಣೆಗೆ ಒಳಪಡಿಸಿದಾಗ ಅವರ ಪ್ರಕಾರ ಅವರು ಮೊದಲು ಟೋಕಿಯೋಗೆ ತೆರಳಿ ಅಲ್ಲಿಂದ ದೆಹಲಿಗೆ ಬಂದು ಬ್ರಿಟಿಷರಿಗೆ ಶರಣಾಗುವುದಾಗಿತ್ತು. ಆದರೆ ಅವರ ಮಾತಿನಲ್ಲಿ ಒಂದಿಷ್ಟು ಸತ್ಯವಿರಲಿಲ್ಲ ಎಂದು ಯಾವುದೇ ಪ್ರಯಾಸವಿಲ್ಲದೆ ತಿಳಿಯಬಹುದಾಗಿತ್ತು, ಈ ಬಂಗಾಳದ ಹುಲಿ, ಕ್ರಾಂತಿಕಾರಿ ನಾಯಕ ಬ್ರಿಟಿಷರಿಗೆ ಶರಣಾಗಲು ಬಯಸಿದ್ದರು ಅಂದರೆ ನಂಬಲಸಾಧ್ಯ!.
ಅದಾಗಲೇ ಭಾರತೀಯ ಗುಪ್ತಚರ ಇಲಾಖೆ ಮಾಹಿತಿ ಕಲೆಹಾಕಲು ತುಂಬಾನೇ ಪ್ರಯತ್ನಿಸಿತ್ತು ಆದರೆ ಯಾವುದೇ ಕುರುಹುಗಳು ದೊರಕದೆ ಕೈಚೆಲ್ಲಿತ್ತು. ಆದರೆ ಆಂಗ್ಲರು ಈ ಪ್ರಯತ್ನವನ್ನ ಇಲ್ಲಿಗೆ ಬಿಡುವವರಾಗಿರಲಿಲ್ಲ ಅವರಿಗೆ ಮರಣದ ಸತ್ಯ ಅರಿವಾಗಬೇಕಿತ್ತು. ಏಕೆಂದರೆ ಅವರಿಗೆ ತಿಳಿದಿತ್ತು ನೇತಾಜಿ ಏನಾದರೂ ತಿರುಗಿ ಬಂದರೆ ಪ್ರತಿಯೊಬ್ಬ ಭಾರತೀಯನ ಮನಸಿನಲ್ಲೂ ಸ್ವಾತಂತ್ರ್ಯದ ಕಿಚ್ಚು ಹಚ್ಚುವಲ್ಲಿ ಯಶಸ್ವಿ ಆಗುವುದರಲ್ಲಿ ಎಳ್ಳಷ್ಟೂ ಸಂಶಯವಿರಲಿಲ್ಲ ಇದೊಂದು ಭಯ ಆಂಗ್ಲರನ್ನ ಬಿಡದೆ ಕಾಡುತಿತ್ತು,ಅದಕ್ಕಾಗಿ ಅವರು ಅಮೆರಿಕಾದ ಸಹಾಯ ಪಡೆದರು ಆದರೆ ಅವರಿಗೆ ಅಲ್ಲೂ ಸೋಲಾಯಿತು, ತದನಂತರ ಆಂಗ್ಲರು ಐ ಏನ್ ಏ ಯಾ ಮೇಜರ್ ಜನರಲ್ ಜೆ. ಕೆ. ಬೋಸ್ಲೇ ಅವರನ್ನ ಬಂದಿಸಿದ್ದರು, ಆಂಗ್ಲರು ಅವರನ್ನ ಅತ್ಯಂತ ಕ್ರೋರವಾಗಿ ಹಿಂಸಿಸಿದರು ಕೊನೆಗೆ ಬೋಸ್ಲೇ ಅವರು ಹೇಳಿಕೆ ನೀಡಲು ತಯಾರಾದರು ಅವರ ಪ್ರಕಾರ ನೇತಾಜಿ ಜಪಾನಿಯರ ಸಹಾಯದಿಂದ ಮೊದಲು ಟೋಕಿಯೋಗೆ ಹೋಗಿ ನಂತರ ಮಂಚೂರಿಯಾಗೆ ಹೋಗುವುದಾಗಿತ್ತು .
ಇಲ್ಲಿ ರಷ್ಯಾದ ಜೋಸೆಫ್ ಸ್ಟೈಲಿನ್ ಯಾವುದೇ ತರಹದಲ್ಲು ನೇತಾಜಿಗೆ ಸಹಾಯ ಮಾಡಲು ತಯಾರಿದ್ದರು, ಅದಕ್ಕೆ ಎರಡು ಕಾರಣ ಇತ್ತು.
೧) ಅಮೇರಿಕಾ ಈಗ ಯುದ್ಧ ಸಮಯದಲ್ಲಿ ರಷ್ಯಾಕ್ಕೆ ಸಹಾಯ ಮಾಡುತ್ತಿದ್ದರೂ ನಂತರದ ಸತ್ಯದ ಅರಿವು ಸ್ಟಾಲಿನ್ ಗೆ ತಿಳಿದಿತ್ತು, ಅದೇನೆಂದರೆ ಯುದ್ಧದ ನಂತರ ಅಮೇರಿಕಾ ರಷ್ಯಾದ ಶತ್ರು ರಾಷ್ಟ್ರ ಆಗುವುದರಲ್ಲಿ ಸಂಶಯವಿರಲಿಲ್ಲ ಇದಕ್ಕಾಗಿ ಸ್ಟಾಲಿನ್ ಬೋಸ್ ರ ಸಹಾಯದಿಂದ ಜಪಾನ್ನೊಂದಿಗೆ ಸಂಬಂಧ ಬೆಸೆಯಲು ಬಯಸಿದ್ದರು ಹಾಗೆ ಭಾರತದೊಂದಿಗಿನ ಸ್ನೇಹ ಗಟ್ಟಿಯಾಗಿಸಲು ಬಯಸಿದ್ದರು.
೨) ಎರಡನೇ ಕಾರಣ ಸ್ವಲ್ಪ ವ್ಯಯಕ್ತಿಕ, ಗಾಂಧೀಜಿಯ ವಿಚಾರಧಾರೆ ಮತ್ತು ಸ್ಟಾಲಿನ್ ನ ವಿಚಾರಧಾರೆ ಸಂಪೂರ್ಣ ಬೇರೆಯದಾಗಿತ್ತು, ಗಾಂಧೀಜಿಯ ಅಹಿಂಸಾ ತತ್ವವನ್ನ ಸ್ಟಾಲಿನ್ ಒಪ್ಪುತ್ತಿರಲಿಲ್ಲ, ಅದನ್ನ ಅವರು ಮೂರ್ಖತನ ಎಂದು ಭಾವಿಸಿದ್ದರು ಹಾಗು ನೆಹರು ಅವರ ಕಟ್ಟಾ ವಿರೋಧಿ ಸ್ಟಾಲಿನ್, ಆದರೆ ಬೋಸ್ ಮೇಲೆ ಅಗಾದವಾದ ಗೌರವ, ಪ್ರೀತಿ , ಅಭಿಮಾನ ಇತ್ತು.
ಇದೆಲ್ಲದರ ನಡುವೆ ರಷ್ಯಾದಲ್ಲಿ ನೇತಾಜಿಯ ಇರುವಿಕೆಯ ಬಗ್ಗೆ ಭಾರತೀಯ ಗುಪ್ತಚರ ಇಲಾಖೆಗೆ ಮತ್ತು ಬ್ರಿಟಿಷ್ ಪತ್ತೇದಾರಿ ವಿಭಾಗ MI6ಗೆ ದೊರಕಿತ್ತು ಆದರೆ ನೇತಾಜಿಯನ್ನ ಪತ್ತೆಹಚ್ಚುವುದರಲ್ಲಿ ವಿಫಲರಾಗಿದ್ದರು.
1999 ರಲ್ಲಿ ಭಾರತ ಸರಕಾರ ಮುಖರ್ಜಿ ಕಮಿಷನ್ ನೇಮಕ ಮಾಡಿತ್ತು, ಇವರ ವರದಿ ಪ್ರಕಾರ ಬೋಸ್ ಮರಣ ವಿಮಾನ ಅಪಘಾತದಲ್ಲಿ ಮತ್ತು ಸುಟ್ಟ ಗಾಯಗಳಿಂದ ಆಗಿರಲಿಲ್ಲ, ಏಕೆಂದರೆ ಇವರು ತೈಪೈ ಗೆ ಭೇಟಿ ನೀಡಿದಾಗ 1945ರಲ್ಲಿ ಅಲ್ಲಿ ಮತ್ತು ಅಲ್ಲಿನ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ವಿಮಾನ ಅಪಘಾತ ಸಂಭವಿಸರಲಿಲ್ಲ.
ಇದೆಲ್ಲದರ ನಡುವೆ ಇನ್ನೊಂದು ಕುತೂಹಲಕಾರಿ ಘಟನೆ ಭಾರತದಲ್ಲಿ ನಡೆದಿತ್ತು ಅದೇನೆಂದರೆ, ಭಗವಾನ್ ಎಂಬ ಹೆಸರಿನ ಒಬ್ಬ ಸಾದು ನೇಪಾಳದಿನದ ಬಂದು ಉತ್ತರ ಪ್ರದೇಶದ ಲಕ್ನೌನಲ್ಲಿ ನೆಲೆಸಲು ಆರಂಭಿಸಿದ್ದರು, ಆದರೆ ಸುರೇಂದ್ರ ಸಿಂಗ್ ಚೌಹಾಣ್ ರನ್ನ ಹೊರತುಪಡಿಸಿ ಬೇರಾರಿಗೂ ಇವರ ಪರಿಚಯವಿರಲಿಲ್ಲ. ಮತ್ತು ಅವರು ಯಾರ ಜೊತೇಗು ಅಷ್ಟಾಗಿ ಬೆರೆಯುತ್ತಿರಲಿಲ್ಲ, ಹೀಗಿರುವಾಗ ಒಂದು ದಿನ ಅನಿವಾರ್ಯವಾಗಿ ಅವರ ಕನ್ನಡಕದ ದುರಸ್ತಿಗಾಗಿ ಕನ್ನಡಕದ ಅಂಗಡಿಗೆ ಹೋಗಬೇಕಾಗಿ ಬರುತ್ತದೆ ಆಗ ಕನ್ನಡಕದ ತಪಾಸಣೆ ಮಾಡುವಾಗ ತಲೆಯಲ್ಲಿರುವ ಟರ್ಬನ್ ಅನ್ನು ತೆಗೆಯುತ್ತಾರೆ ಆಗ ಅಲ್ಲಿಯೇ ನೆರೆದಿದ್ದವರಲ್ಲಿ ಒಬ್ಬ ವ್ಯಕ್ತಿ ನೇತಾಜಿ ಎಂದು ಕೂಗುತ್ತಾನೆ, ಅಲ್ಲಿ ನೆರೆದಿದ್ದವರೆಲ್ಲ ಆಶ್ಚರ್ಯ ಚಕಿತರಾಗುತ್ತಾರೆ ತಕ್ಷಣವೇ ಅವರ ಕಾಲು ಮುಟ್ಟಿ ನಮಸ್ಕರಿಸುತ್ತಾರೆ ಆದರೆ ಸಾದು ಭಗವಾನ್ ಜಿ ಮತ್ತು ಸುರೇಂದ್ರ ಸಿಂಗ್ ಚೌಹಾನರು ಕೂಡಲೇ ಸ್ಥಳದಿಂದ ನಿರ್ಗಮಿಸಿದ್ದರು.
ಈ ಘಟನೆಯ ನಂತರ ಜನ ಅವರನ್ನ ಗುಮ್ನಾಮಿ ಬಾಬಾ ಎಂದು ಕರೆಯಲು ಆರಂಭಿಸಿದ್ದರು, 1962, ರಲ್ಲಿ ಪವಿತ್ರ ರಾಯ್ ಬಾಬಾರನ್ನ ಭೇಟಿ ಮಾಡಿದ್ದರು ಆಗ ಬಾಬಾ ಉದ್ದವಾದ ದಾಡಿ ಬಿಟ್ಟಿದ್ದರು ಆದರೆ ನೋಡಲು ಮತ್ತು ಧ್ವನಿಯಿಂದ ಅವರು ನೇತಾಜಿಯ ತರಹವೇ ಇದ್ದರು. ಇನ್ನೊಂದು ಪ್ರಬಲವಾದ ದಾಖಲೆ ಇದಕ್ಕೆ ಪುಷ್ಟಿಕೊಡುವಂತಹುದು ಎಂದರೆ ಹಸ್ತಾಕ್ಷರ ತಜ್ಞ ಕಾರ್ಲ್ ಬ್ಯಾಗೆಟ್ ಪ್ರಕಾರ ಗುಮ್ನಾಮಿ ಬಾಬಾ ಮತ್ತು ಸುಭಾಷ್ ಚಂದ್ರ ಬೋಸ್ ಒಬ್ಬರೇ !.
16 ಸೆಪ್ಟೆಂಬರ್ 1965ರಲ್ಲಿ ಗುಮ್ನಾಮಿ ಬಾಬಾರವರ ದೇಹಾಂತ್ಯ ಫಾಜಿಯಾಬಾದ್ ರನ್ಬಸೇರಾದಲ್ಲಿ ಆಗುತ್ತದೆ, ಅಲ್ಲಿಗೆ ಅವರೊಂದಿಗೆ ಅನೇಕ ಸತ್ಯಗಳು ಕೂಡ ಮಣ್ಣಾದವು.
ಆದರೆ ಈ ಲೇಖನನ ಕೊನೆಗೊಳಿಸುವ ಮೊದಲು ಒಂದು ವಿಷಯದ ಬಗ್ಗೆ ಹೇಳದೆ ಮುಗಿಸಿದರೆ ತಪ್ಪಾಗುತ್ತದೆ , ನಿಮಗೆಲ್ಲ ತಿಳಿದಿರುವ ಹಾಗೆ ವಿಜಯಲಕ್ಷ್ಮಿ ಪಂಡಿತ್ ಭಾರತದಿಂದ ರಷ್ಯಾಕ್ಕೆ ಮೊದಲ ರಾಯಭಾರಿ ಆಗಿದ್ದವರು ಹಾಗು ನೆಹರು ಅವರ ಸಹೋದರಿ ಕೂಡ ಹೌದು ಅವರು ರಷ್ಯಾದಿಂದ ಮರಳಿದ ನಂತರ ಒಂದು ಸಮಾರಂಭದಲ್ಲಿ ತಮ್ಮ ಭಾಷಣದ ನಡುವೆ ಜನರನ್ನುದ್ದೇಶಿಸಿ " ನಾನು ರಷ್ಯಾದಲ್ಲಿ ಇದ್ದಾಗ ಒಬ್ಬ ಮಹಾನ್ ವ್ಯಕ್ತಿಯನ್ನ ಭೇಟಿಮಾಡಿದ್ದೆ ನಿಮಗೆ ಅವರ ಹೆಸರು ತಿಳಿದರೆ ನಿಮಗೆ ಭಾರತ ಸ್ವಾತಂತ್ರ್ಯ ಗಳಿಸಿದ ದಿನ ನೀವು ಸಂಭ್ರಮಿಸಿದ್ದಕ್ಕಿಂತಲೂ ಹೆಚ್ಚು ಸಂಬ್ರಮಿಸ್ತೀರಾ ಎಂದರು ಆದರೆ ತಕ್ಷಣ ಅಲ್ಲೇ ಪಕ್ಕದಲ್ಲಿದ್ದ ನೆಹರುರವರು ಅವರ ಮಾತನ್ನ ಅರ್ಧದಲ್ಲೇ ತಡೆದರು ಮತ್ತು ಮುಂದುವರೆಸಲು ಬಿಡಲಿಲ್ಲ ".
ಆದರೆ ನೇತಾಜಿಯ ಮರಣದ ವಿಷಯ ಇಂದಿಗೂ ನಿಗೂಢ ಸಂಶಯಾಸ್ಪದ ಮತ್ತು ಉತ್ತರಿಸಲಾಗದ ಪ್ರಶ್ನೆ, ಏನೆ ಇರಲಿ ಈ ದೇಶದ ಸ್ವಾತಂತ್ರ್ಯದಲ್ಲಿ ಈ ಬಂಗಾಳದ ಹುಲಿಯದ್ದು ಸಿಂಹಪಾಲು, ನೇತಾಜಿಯ ಕೊಡುಗೆ ಈ ನನ್ನ ಮಾತೃ ಭೂಮಿಗೆ ಅಪಾರ ಮತ್ತು ಆಗಾದ, ಭಾರತ ಇಂದಿಗೂ ಸುಭಾಷ್ ಚಂದ್ರ ಬೋಸ್ ರನ್ನ ಪ್ರತಿದಿನ ನೆನೆಯುತ್ತೆ, ಹಾಗೆಯೆ ಜನಮಾನಸದಲ್ಲಿ ನೇತಾಜಿ ಎಂದೆಂದಿಗೂ ಅಮರ.
CLICK HERE TO SEE VIDEO IN ENGLISH
0 Comments